ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಂಡರ್‌ಪಾಸ್‌ಗೆ ಮತ್ತೆ ಜಲಬಾಧೆ
ರಾಜ್ಯಪಾಲರಿಂದ ನಿನ್ನೆಯಷ್ಟೆ ಉದ್ಘಾಟನೆಯಾದ ಕಾವೇರಿ ಜಂಕ್ಷನ್ ಬಳಿಯ ಅಂಡರ್ಪಾಸ್‌ಗೆ ಬಾಲಗ್ರಹ ಕಾಡಿದೆ. ಇಲ್ಲಿನ ಜಲಮಂಡಳಿಯ ದೊಡ್ಡ ನೀರಿನ ಪೈಪ್ ಒಡೆದು ರಸ್ತೆ ಜಲಾವೃತಗೊಂಡಿದ್ದು ಮತ್ತು ಜಲಬಾಧೆ ಕಾಡಿದೆ.

ಕಾಮಗಾರಿ ನಡೆಯುವ ಸಂದರ್ಭದಲ್ಲಿ ಬೃಹದಾಕಾರದ ಮರವೊಂದನ್ನು ರಕ್ಷಿಸುವ ಸಲುವಾಗಿ ರಸ್ತೆಯನ್ನು ಸ್ವಲ್ಪಮಟ್ಟಿಗೆ ಮಾತ್ರ ವಿಸ್ತರಿಸಿ ಡಾಂಬರೀಕರಣ ಮಾಡಿರುವುದರಿಂದ ಅದರ ಕೆಳಗೆ ಇದ್ದ ನೀರಿನ ಪೈಪ್ ಭಾರೀ ವಾಹನ ಓಡಾಟದಿಂದ ಒಡೆದುಹೋಗಿದ್ದು ಈ ಸಮಸ್ಯೆ ಎದುರಾಗಿದೆ.

ನೀರಿನ ಕೊಳವೆಯ ಸಂಪರ್ಕ ಮನೆಯೊಂದಕ್ಕೆ ಹಾದುಹೋಗುತ್ತಿದ್ದು, ಭೂಮಿಯ ಮೇಲ್ಭಾಗದಲ್ಲೇ ಇರುವುದನ್ನು ಅರಿಯದೆ ಪಾಲಿಕೆಯು ರಸ್ತೆಗೆ ಡಾಂಬರೀಕರಣ ಮಾಡಿರುವುದೇ ಈ ಸಮಸ್ಯೆಗೆ ಕಾರಣವಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪಾಲಿಕೆಯ ಅಧಿಕಾರಿಗಳ ಮೇಲೆ ಸಾರ್ವಜನಿಕರು ವಾಗ್ದಾಳಿ ನಡೆಸಿದ್ದು, ಈಗ ಜಲಮಂಡಳಿ ವತಿಯಿಂದ ದುರಸ್ತಿ ಕಾರ್ಯ ನಡೆದಿದೆ ಎಂದು ತಿಳಿದುಬಂದಿದೆ.
ಮತ್ತಷ್ಟು
ಶೀಘ್ರ ಚುನಾವಣೆಗೆ ವಾಟಾಳ್ ಒತ್ತಾಯ
ಗುಲ್ಬರ್ಗಾ: ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್
ಬಂಟ್ವಾಳ: ರಿಕ್ಷಾ ಚಾಲಕನ ಭೀಕರ ಕೊಲೆ
ಪ್ರತಿಭಾ ಕೊಲೆ: ಮಿತ್ತಲ್ ವಿಚಾರಣೆಗೆ ಸು.ಕೋ ಒಪ್ಪಿಗೆ
ವಿಶ್ವನಾಥ್ ನಿಂದನೆ ಪ್ರಕರಣಕ್ಕೆ ಹೈ.ಕೋ. ತಡೆ
ಪಬ್ ಅವಧಿ ವಿಸ್ತರಣೆಗೆ ವ್ಯಾಪಕ ವಿರೋಧ