ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೆ ಮುಷ್ಕರಕ್ಕೆ ಸಜ್ಜಾಗಿರುವ ಲಾರಿ ಮಾಲೀಕರು
ವಾಣಿಜ್ಯ ಉದ್ದೇಶದ ವಾಹನಗಳಿಗೆ ಸ್ಪೀಡ್ ಗವರ್ನರ್ ಅಳವಡಿಸಬೇಕೆಂಬ ಹೈಕೋರ್ಟ್ ಆದೇಶವನ್ನು ವಿರೋಧಿಸಿ ಲಾರಿ ಮಾಲೀಕರು ನಾಳೆ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ.

ರಾಜ್ಯದ ವಾಹನಗಳೇ ಅಲ್ಲದೆ ಹೊರರಾಜ್ಯದ ಲಾರಿ, ಖಾಸಗಿ ಬಸ್‌ಗಳು, ಮ್ಯಾಕ್ಸಿಕ್ಯಾಬ್‌ಗಳ ಸಂಚಾರವೂ ಸ್ಥಗಿತಗೊಳ್ಳುವುದರಿಂದ ಜನ ಸಾಮಾನ್ಯರು ಅಗತ್ಯ ವಸ್ತುಗಳಿಗಾಗಿ ಪರದಾಡುವ ಸನ್ನಿವೇಶ ನಿರ್ಮಾಣವಾಗಲಿದೆ.

ಹೈಕೋರ್ಟ್ ಆದೇಶದಂತೆ ವೇಗ ನಿಯಂತ್ರಕವನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಾಗಿರುವುದರಿಂದ ಸರಕಾರ ಈ ಕುರಿತು ಯಾವ ತೀರ್ಮಾನವನ್ನೂ ಕೈಗೊಳ್ಳುವುದು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಕಾರ್ಯಾಲಯದಿಂದ ಮನವರಿಕೆ ಮಾಡಿಕೊಡಲಾಗಿದೆಯಾದರೂ ಲಾರಿ ಮಾಲೀಕರು ತಮ್ಮ ಪಟ್ಟನ್ನು ಸಡಿಲಿಸದಿರಲು ನಿರ್ಧರಿಸಿದ್ದಾರೆ.

ದೆಹಲಿಯಲ್ಲಿ ಸುಮಾರು 2800 ರೂ.ಗಳಿಗೆ ಸಿಗುವ ವೇಗ ನಿಯಂತ್ರಕಕ್ಕೆ ನಮ್ಮ ರಾಜ್ಯದಲ್ಲಿ ಸುಮಾರು 15 ಸಾವಿರ ರೂ.ವರೆಗೆ ದರ ವಿಧಿಸಲಾಗುತ್ತದೆ. ಇದಕ್ಕೆ ನಾವು ಬಲಿಪಶುಗಳಾಗಲು ಸಿದ್ಧರಿಲ್ಲ. ಇದರ ವಿರುದ್ಧ ಹೋರಾಟ ನಡೆಸುವುದಷ್ಟೇ ಅಲ್ಲದೇ, ಹೈಕೋರ್ಟ್‌ನ ಈ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಲಾರಿ ಮಾಲಿಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ತಿಳಿಸಿದ್ದಾರೆ.
ಮತ್ತಷ್ಟು
ಅಂಡರ್‌ಪಾಸ್‌ಗೆ ಮತ್ತೆ ಜಲಬಾಧೆ
ಶೀಘ್ರ ಚುನಾವಣೆಗೆ ವಾಟಾಳ್ ಒತ್ತಾಯ
ಗುಲ್ಬರ್ಗಾ: ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್
ಬಂಟ್ವಾಳ: ರಿಕ್ಷಾ ಚಾಲಕನ ಭೀಕರ ಕೊಲೆ
ಪ್ರತಿಭಾ ಕೊಲೆ: ಮಿತ್ತಲ್ ವಿಚಾರಣೆಗೆ ಸು.ಕೋ ಒಪ್ಪಿಗೆ
ವಿಶ್ವನಾಥ್ ನಿಂದನೆ ಪ್ರಕರಣಕ್ಕೆ ಹೈ.ಕೋ. ತಡೆ