ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಾಳೆ ಕಬ್ಬು ಬೆಳೆಗಾರರ ಹೋರಾಟ
ರಾಜ್ಯ ಸರಕಾರವು ಕಬ್ಬು ಬೆಳೆಗಾರರಿಗೆ ತೃಪ್ತಿಯಾಗದ ರೀತಿಯಲ್ಲಿ ಬೆಲೆ ನಿರ್ಧರಿಸಿರುವುದನ್ನು ಖಂಡಿಸಿ ರಾಜ್ಯ ರೈತ ಸಂಘವು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ತೀವ್ರ ಪ್ರತಿಭಟನೆ ನಡೆಸಲಿದೆ.

ನಾಳೆ ನಡೆಯಲಿರುವುದು ಮೊದಲನೆಯ ಹಂತದ ಹೋರಾಟವಾಗಿದ್ದು ಇದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ನಡೆಯಲಿದೆ. ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ಅಧಿಕಾರ ವರ್ಗಕ್ಕೆ ಮತ್ತು ಸರಕಾರಕ್ಕೆ ಮನದಟ್ಟು ಮಾಡಿಕೊಡಲು ಹಾಗೂ ಅವರ ಹಿತವನ್ನು ಕಾಪಾಡಲು ತಕ್ಷಣವೇ ಅನುಸರಿಸಬೇಕಾದ ಅಗತ್ಯ ಕ್ರಮಗಳನ್ನು ಅನುಷ್ಠಾನಗೊಳಿಸಲು ಒತ್ತಾಯಿಸಲಾಗುವುದೆಂದು ತಿಳಿದುಬಂದಿದೆ.

ರಾಜ್ಯದ ಕಬ್ಬು ಬೆಳೆಗಾರರು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಶೋಚನೀಯ ಮಟ್ಟವನ್ನು ಮುಟ್ಟಿದ್ದರೂ ಸಹ ಸೂಕ್ತ ನಿರ್ಧಾರವನ್ನು ತಳೆಯುವಲ್ಲಿ ರಾಜ್ಯಪಾಲರು ಹಾಗೂ ಅವರ ಸಲಹೆಗಾರರು ಎಡವಿರುವುದು ಸ್ಪಷ್ಟವಾಗಿ ಎದ್ದುಕಾಣುತ್ತದೆ. ಬೆಳೆಗಾರರ ಸಮಸ್ಯೆಗಳು ಈ ಸಲಹೆಗಾರರಿಗೆ ಸರಿಯಾಗಿ ಅರ್ಥವೇ ಆಗಿಲ್ಲದಿರುವುದು ಅತ್ಯಂತ ಶೋಚನೀಯ ಸಂಗತಿ ಎಂದು ರಾಜ್ಯ ರೈತಸಂಘದ ಮೂಲಗಳು ವಿಷಾದಿಸಿವೆ.

ಪ್ರತಿ ಟನ್ ಕಬ್ಬಿಗೆ 200 ರೂ. ಹೆಚ್ಚುವರಿಯಾಗಿ ನೀಡುವುದರ ಜೊತೆಗೆ ಕಬ್ಬು ಅರೆಯುವುದರ ಕುರಿತು ಸೂಕ್ತ ವ್ಯವಸ್ಥೆ ಮಾಡಬೇಕು ಎಂಬುದು ಸಂಘದ ಒತ್ತಾಯ. ಇದಕ್ಕೆ ಮಾರ್ಚ್ 3ರವರೆಗೆ ಗಡುವು ನೀಡಿರುವ ರೈತ ಸಂಘ, ಇದು ಕೈಗೂಡದಿದ್ದರೆ ರಾಜಭವನಕ್ಕೆ ಮುತ್ತಿಗೆ ಹಾಕಲು ಹಾಗೂ ಜೈಲ್‌ಭರೋ ಚಳುವಳಿ ನಡೆಸಲು ಚಿಂತನೆ ನಡೆಸಿದ್ದು ಇದಕ್ಕೆ ಉಳಿದ ಸಂಘಟನೆಗಳೂ ಬೆಂಬಲ ನೀಡಿವೆ.
ಮತ್ತಷ್ಟು
ಸಾಫ್ಟ್‌ವೇರ್-ಹಾರ್ಡ್‌ಕೋರ್: ಇನ್ನೊಬ್ಬ ಉಗ್ರನ ಸೆರೆ
ಮತ್ತೆ ಮುಷ್ಕರಕ್ಕೆ ಸಜ್ಜಾಗಿರುವ ಲಾರಿ ಮಾಲೀಕರು
ಅಂಡರ್‌ಪಾಸ್‌ಗೆ ಮತ್ತೆ ಜಲಬಾಧೆ
ಶೀಘ್ರ ಚುನಾವಣೆಗೆ ವಾಟಾಳ್ ಒತ್ತಾಯ
ಗುಲ್ಬರ್ಗಾ: ಗಾಳಿಯಲ್ಲಿ ಗುಂಡು, ಲಾಠಿಚಾರ್ಜ್
ಬಂಟ್ವಾಳ: ರಿಕ್ಷಾ ಚಾಲಕನ ಭೀಕರ ಕೊಲೆ