ಅತ್ಯಾಧುನಿಕ ತಂತ್ರಜ್ಞಾನದ 'ಹಾಕ್ ಎಮ್‌ಕೆ 132' ಯುದ್ಧ ವಿಮಾನಗಳು ಶನಿವಾರ ದೇಶಕ್ಕೆ ಅಧಿಕೃತವಾಗಿ ಸರ್ಮಪಣೆಗೊಳ್ಳಲಿವೆ. ಬೀದರ್ ವಾಯುಸೇನಾ ತರಬೇತಿ ಕೇಂದ್ರದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ರಕ್ಷಣಾ ಸಚಿವ ಎ.ಕೆ. ಆಂಟನಿ ಈ ಯುದ್ದವಿಮಾನಗಳನ್ನು ವಾಯುಸೇನೆಗೆ ಹಸ್ತಾಂತರಗೊಳಿಸಲಿದ್ದಾರೆ.
66 ಹಾಕ್ ಎಮ್‌ಕೆ-132 ಯುದ್ದವಿಮಾನಗಳ ಪೈಕಿ 8 ವಿಮಾನಗಳು ಇಲ್ಲಿನ ವಾಯುಸೇನಾ ತರಬೇತಿ ಕೇಂದ್ರಕ್ಕೆ ಈಗಾಗಲೇ ಆಗಮಿಸಿದ್ದು, ನಾಳೆ ನಡೆಯಲಿರುವ ಸಮಾರಂಭದಲ್ಲಿ ಇವುಗಳ ಹಾಗೂ ಸೂರ್ಯಕಿರಣ ಯುದ್ಧ ವಿಮಾನಗಳ ಆಕರ್ಷಕ ಹಾರಾಟದ ವಿಶೇಷ ಪ್ರದರ್ಶನವನ್ನು ಆಯೋಜಿಸಲಾಗಿದೆ.
ಪ್ರಪಂಚದ ಅತ್ಯಾಧುನಿಕವಾಗಿರುವ ಈ ಯುದ್ಧ ವಿಮಾನ ಅತಿ ವೇಗದಲ್ಲಿ ಸಾಗಿ ಶತ್ರು ನೆಲೆಗಳನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ. ಆದರೆ ಇದರ ಚಾಲನೆ ಹಾಗೂ ಬಳಕೆ ಬಹಳ ಕ್ಲಿಷ್ಟಕರವಾಗಿದ್ದು, ಒಮ್ಮೆ ಇದರ ಚಾಲನೆಯನ್ನು ಅರಿತವರು ವಿಶ್ವದ ಯಾವುದೇ ಯುದ್ಧ ವಿಮಾನವನ್ನು ನಿರಾತಂಕವಾಗಿ ಚಾಲನೆ ಮಾಡಬಹುದು ಎಂದು ಏರ್ ಮಾರ್ಷಲ್ ನೋವ್ಹಾರಾ ಹೇಳಿದ್ದಾರೆ.
|