ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಮನಗರದಿಂದ ಸ್ಪರ್ಧೆಗೆ ಡಿಕೆಶಿ ಒಲವು
ಪಕ್ಷ ಬಯಸಿದರೆ ರಾಮನಗರ ಕ್ಷೇತ್ರದಿಂದ ಮುಂದಿನ ಚುನಾವಣೆಯಲ್ಲಿ ಕಣಕ್ಕಿಳಿಯಲು ಸಿದ್ದ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಗುರುವಂದನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಮ್ಮ ಮೂಲ ಕ್ಷೇತ್ರ ಕನಕಪುರವಾಗಿದ್ದರೂ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿಯವರು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದರೆ ಈ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದರು.

ಗುರುವಂದನ ಸ್ವೀಕರಿಸಿದ ಬಳಿಕ ಮಾತನಾಡಿದ ಶ್ರೀ ಶಿವಕುಮಾರ ಸ್ವಾಮೀಜಿಯವರು ಭಯೋತ್ಪಾದನೆಯನ್ನು ಹತ್ತಿಕ್ಕಲು ಎಲ್ಲರೂ ಕೈಜೋಡಿಸಬೇಕು, ಆಗ ಮಾತ್ರ ಭಯೋತ್ಪಾದನೆ ವಿರುದ್ಧ ಹೋರಾಡಲು ಸಾಧ್ಯ ಎಂದು ತಿಳಿಸಿದರು. ಸಮಾರಂಭದಲ್ಲಿ ಹಲವು ಮಠದ ಪೀಠಾಧೀಶರು ಭಾಗವಹಿಸಿದ್ದರು.
ಮತ್ತಷ್ಟು
ಕ್ಷೇತ್ರ ಮರುವಿಂಗಡಣೆ ಯುಪಿಎ ಸಾಧನೆ : ಸಿದ್ದು
ನಾಳೆ ಹಾಕ್ ಯುದ್ಧ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ
ನಾಳೆ ಕಬ್ಬು ಬೆಳೆಗಾರರ ಹೋರಾಟ
ಸಾಫ್ಟ್‌ವೇರ್-ಹಾರ್ಡ್‌ಕೋರ್: ಇನ್ನೊಬ್ಬ ಉಗ್ರನ ಸೆರೆ
ಮತ್ತೆ ಮುಷ್ಕರಕ್ಕೆ ಸಜ್ಜಾಗಿರುವ ಲಾರಿ ಮಾಲೀಕರು
ಅಂಡರ್‌ಪಾಸ್‌ಗೆ ಮತ್ತೆ ಜಲಬಾಧೆ