ನೂತನವಾಗಿ ನಿರ್ಮಿಸಲಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಹುದ್ದೆಯಲ್ಲಿ ಕನ್ನಡಿಗರನ್ನು ಕಡೆಗೆಣಿಸಲಾಗಿದೆ ಎಂದು ಪ್ರತಿಭಟನೆಗಿಳಿದಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಿಲ್ದಾಣಕ್ಕೆ ಧಾವಿಸಿ ಮುತ್ತಿಗೆ ಹಾಕಿ ಪಿಠೋಪಕರಣಗಳನ್ನು ಧ್ವಂಸ ಮಾಡಿದ ಘಟನೆ ಶುಕ್ರವಾರ ಸಂಭವಿಸಿದೆ.
ವಿಮಾನ ನಿಲ್ದಾಣದಲ್ಲಿನ ಹುದ್ದೆಗಾಗಿ ಇಂದು ಸಂದರ್ಶನವನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಆಗಮಿಸಿದ ಸುಮಾರು 30-40ಜನ ಕರವೇ ಕಾರ್ಯಕರ್ತರು ಏಕಾಏಕಿ ನಿಲ್ದಾಣಕ್ಕೆ ದಾಳಿ ಮಾಡಿ ಕನ್ನಡಪರ ಘೋಷಣೆಗಳನ್ನು ಕೂಗುತ್ತ ಕಚೇರಿಯ ಪಿಠೋಪಕರಣಗಳನ್ನು ಧ್ವಂಸ ಮಾಡಿ ಪರಾರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸಂದರ್ಶನಕ್ಕಾಗಿ ಆಗಮಿಸಿದ ಸಂದರ್ಶನಕಾರರು ಕೂಡ ಭಯದಿಂದ ಸಂದರ್ಶನ ನಡೆಸದೆ ವಾಪಾಸಾಗಿದ್ದಾರೆ. ಈ ಮಧ್ಯೆ ವಿಮಾನ ನಿಲ್ದಾಣದ ವ್ಯವಸ್ಥಾಪಕರು ಈ ಹುದ್ದೆಯಲ್ಲಿ ಯಾರಿಗೂ ಅನ್ಯಾಯ ಮಾಡಿಲ್ಲ. ಕನ್ನಡಿಗರಿಗೆ ಶೇ. 70ರಷ್ಟು ಮೀಸಲಾತಿಯನ್ನು ನೀಡಿದ್ದೇವೆ ಎಂದು ತಿಳಿಸಿದ್ದಾರೆ.
|