ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ ಆರರವರೆಗೆ ಪೊಲೀಸ್ ವಶಕ್ಕೆ ಯಾಹ್ಯಾ
ಬೆಂಗಳೂರಿನ ಗುರಪ್ಪನಪಾಳ್ಯದಲ್ಲಿ ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದ ಶಂಕಿತ ಉಗ್ರ, ಕೇರಳ ಮೂಲದ ಮಹ್ಮದ್ ಯಾಹ್ಯಾ ಕುಟ್ಟಿ ಅಲಿಯಾಸ್ ಮಹ್ಮದ್ ಕಮ್ಮಕುಟ್ಟಿಯನ್ನು ಮಾರ್ಚ್ ಆರರವರೆಗೆ ಪೊಲೀಸ್ ಬಂಧನದಲ್ಲಿ ಇರಿಸುವಂತೆ ಹುಬ್ಬಳ್ಳಿ ನ್ಯಾಯಾಲಯ ಆದೇಶಿಸಿದೆ.

ಇಂದು (ಶನಿವಾರ) ಯಾಹ್ಯಾನನ್ನು ವಿಚಾರಣೆ ನಡೆಸಿದ ಹುಬ್ಬಳ್ಳಿ ವಿಚಾರಣಾ ನ್ಯಾಯಾಲಯವು ಈ ಆದೇಶವನ್ನು ಹೊರಡಿಸಿದೆ. ಮುಖ್ಯವಾಗಿ ಈತ ಸಿಮಿ ಸಂಘಟನೆಯ ಮುಖಂಡನಾಗಿದ್ದ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದ್ದು, ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುವ ನಿಟ್ಟಿನಲ್ಲಿ ಈ ಆದೇಶವನ್ನು ನ್ಯಾಯಾಲಯ ನೀಡಿದೆ ಎಂದು ತಿಳಿದು ಬಂದಿದೆ.

ಇತ್ತೀಚೆಗೆ ಬಂಧಿಸಲಾಗಿರುವ ಅಸಾದುಲ್ಲಾ ಹಾಗೂ ಇತರ ಇಬ್ಬರ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರು ನೀಡಿದ ಮಾಹಿತಿಯ ಆಧಾರದ ಮೇಲೆ ತೀವ್ರ ಶೋಧ ನಡೆಸಿದ ಪೊಲೀಸರು ಯಾಹ್ಯಾನನ್ನು ಬಂಧಿಸುವಲ್ಲಿ ಸಫಲರಾಗಿದ್ದರು.

ಕಳೆದ ಎಂಟು ವರ್ಷಗಳಿಂದ ಸಿಮಿ ಸಂಘಟನೆಯಲ್ಲಿ ಸಕ್ರೀಯವಾಗಿ ಭಾಗವಹಿಸಿದ್ದ ಈತ ಭಯೋತ್ಪಾದನೆ ಸಂಘಟನೆಗೆ ಹಲವು ವಿದ್ಯಾರ್ಥಿಗಳನ್ನು ಸೇಳೆಯುವ ಪ್ರಯತ್ನ ನಡೆಸುತ್ತಿದ್ದು, ಕಿಮ್ಸ್ ವಿದ್ಯಾರ್ಥಿ ಆಸಿಫ್‌ನ ಪ್ರಮುಖ ಗುರುವಾಗಿದ್ದ ಹಾಗೂ ಉಗ್ರರು ನಡೆಸುತ್ತಿದ್ದ ಸಭೆಯಲ್ಲಿ ಈತ ಭಾಗವಹಿಸಿದ್ದ ಎಂಬ ಅಂಶಗಳು ಪ್ರಾಥಮಿಕ ಹಂತದ ವಿಚಾರಣೆಯಲ್ಲಿ ದೊರೆತಿವೆ.
ಮತ್ತಷ್ಟು
ವಿಮಾನ ನಿಲ್ದಾಣದಲ್ಲಿ ಕರವೇ ದಾಂಧಲೆ
ಶಿವಮೊಗ್ಗ: ಎರಡೂ ಸ್ಥಾನಗಳು ಬಿಜೆಪಿಗೆ
ರಾಮನಗರದಿಂದ ಸ್ಪರ್ಧೆಗೆ ಡಿಕೆಶಿ ಒಲವು
ಕ್ಷೇತ್ರ ಮರುವಿಂಗಡಣೆ ಯುಪಿಎ ಸಾಧನೆ : ಸಿದ್ದು
ನಾಳೆ ಹಾಕ್ ಯುದ್ಧ ವಿಮಾನ ರಾಷ್ಟ್ರಕ್ಕೆ ಸಮರ್ಪಣೆ
ನಾಳೆ ಕಬ್ಬು ಬೆಳೆಗಾರರ ಹೋರಾಟ