ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲೋಕಸಭೆಯಲ್ಲಿ ಕರ್ನಾಟಕ ರಾಜ್ಯ ಬಜೆಟ್
2008-09ನೇ ಸಾಲಿನ ರಾಜ್ಯ ಬಜೆಟ್ ಮಾರ್ಚ್ ಎರಡನೇ ವಾರದಲ್ಲಿ ಸಂಸತ್ತಿನಲ್ಲಿ ಕೇಂದ್ರ ಹಣಕಾಸು ಸಚಿವರು ಮಂಡಿಸುವ ನೀರೀಕ್ಷೆ ಇದ್ದು, ಈ ಮೂಲಕ ರಾಜ್ಯದಲ್ಲಿ ಚುನಾಯಿತ ಸರ್ಕಾರದ ಅನುಪಸ್ಥಿತಿಯಲ್ಲಿ ಕೇಂದ್ರದಲ್ಲಿ ಮಂಡನೆಯಾಗುತ್ತಿರುವ ಮೊದಲ ರಾಜ್ಯ ಬಜೆಟ್ ಇದಾಗಿದೆ.

ರಾಜ್ಯದಲ್ಲಿ ಚುನಾವಣಾ ದಿನಾಂಕ ಇನ್ನು ನಿಗದಿಯಾಗದೆ ಇದ್ದುದರಿಂದ ಚುನಾವಣೆ ವಿಳಂಬವಾಗುವ ಸೂಚನೆಗಳು ದಟ್ಟವಾಗಿ ಕಂಡು ಬಂದಿದೆ. ಈ ಕಾರಣ ಪೂರ್ಣ ಪ್ರಮಾಣದ ರಾಜ್ಯ ಬಜೆಟ್‌ನ್ನು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆಗಳು ಇವೆ.

ಮಂಡನೆಗೆ ಪೂರ್ವಭಾವಿಯಾಗಿ ನಡೆಸಲಾಗಿರುವ ಸಭೆಯಲ್ಲಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ್ ರಾವ್ ಭಾಗವಹಿಸಿದ್ದು, ರಾಜ್ಯದ ಯೋಜನೆಗಳಿಗೆ ಅಗತ್ಯ ನೆರವು ಹಾಗೂ ನೆನೆಗುದ್ದಿಗೆ ಬಿದ್ದಿರುವ ಯೋಜನೆಗಳಿಗೆ ಮಂಜೂರಾತಿ ನೀಡುವ ಬಗ್ಗೆ ಚರ್ಚಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

ಈ ಮಧ್ಯೆ ಚುನಾಯಿತ ಸರ್ಕಾರಗಳು ಇಲ್ಲದಿರುವುದರಿಂದ ರಾಜ್ಯದ ಕೆಲವು ಮೂಲಭೂತ ಸಮಸ್ಯೆಗಳಿಗೆ ಪರಿಹಾರ ದೊರಕುವುದು ಕಷ್ಟ ಸಾಧ್ಯ ಎಂಬುದು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿರುವ ಆರೋಪವಾಗಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಕಂಡು ಬಂದಿರುವ ಕಬ್ಬು ಬೆಳೆಗಾರರ ಸಮಸ್ಯೆ ಹಾಗೂ ರಾಜ್ಯದ ಉದ್ಬವವಾಗಿರುವ ಇತರ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಬಜೆಟ್ ಸಹಕಾರಿಯಾಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು
ಉಗ್ರರ ತಾಣವಾಗುತ್ತಿರುವ ಸಿಲಿಕಾನ್ ಸಿಟಿ
ಮಾರ್ಚ ಆರರವರೆಗೆ ಪೊಲೀಸ್ ವಶಕ್ಕೆ ಯಾಹ್ಯಾ
ವಿಮಾನ ನಿಲ್ದಾಣದಲ್ಲಿ ಕರವೇ ದಾಂಧಲೆ
ಶಿವಮೊಗ್ಗ: ಎರಡೂ ಸ್ಥಾನಗಳು ಬಿಜೆಪಿಗೆ
ರಾಮನಗರದಿಂದ ಸ್ಪರ್ಧೆಗೆ ಡಿಕೆಶಿ ಒಲವು
ಕ್ಷೇತ್ರ ಮರುವಿಂಗಡಣೆ ಯುಪಿಎ ಸಾಧನೆ : ಸಿದ್ದು