ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವೇಗ ನಿಯಂತ್ರಕ ಕಡ್ಡಾಯ: ಸರಕು ಮೇಲೆ ಪರಿಣಾಮ
ಲಾರಿ ಹಾಗೂ ಇತರ ಖಾಸಗಿ ವಾಹನ ಮಾಲೀಕರು ಶುಕ್ರವಾರದ ಮಧ್ಯರಾತ್ರಿಯಿಂದ ಪ್ರಾರಂಭಿಸಿರುವ ಮುಷ್ಕರದ ಕಾರಣ ಎಲ್ಲ ಸರಕು ಸಾಗಣಿ ಮತ್ತು ವಾಣಿಜ್ಯ ವಾಹನಗಳ ಸಂಚಾರ ಸ್ಥಗಿತಗೊಂಡಿದ್ದು, ಸಂಚಾರ ಹಾಗೂ ಸರಕುಗಳ ಮೇಲೆ ಗಾಢವಾದ ಪರಿಣಾಮ ಬೀರಿದೆ.

ವೇಗ ನಿಯಂತ್ರಕ ಅಳವಡಿಕೆಯನ್ನು ಕಡ್ಡಾಯಗೊಳಿಸಿರುವ ನ್ಯಾಯಾಲಯದ ಆದೇಶವನ್ನು ಹಿಂತೆಗೆಯುವಂತೆ ಒತ್ತಾಯಿಸಿ ನಡೆಸಲಾಗಿರುವ ಮುಷ್ಕರದಿಂದ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಮುಂದಿನ ದಿನಗಳಲ್ಲಿ ಅಗತ್ಯವಸ್ತುಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಬಹುದು ಹಾಗೂ ದಿನವಸ್ತುಗಳ ಬೆಲೆ ಏರಿಕೆಯಾಗುವ ಸಂಭವ ದಟ್ಟವಾಗಿದೆ ತಿಳಿದು ಬಂದಿದೆ.

ಈ ಮುಷ್ಕರದಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ. ಆದಾಯ ನಷ್ಟವಾಗಲಿದೆ. ಆದರೆ ಪ್ರತಿನಿತ್ಯದ ಹಾಲು, ತರಕಾರಿ ಸಾಗಾಣಿಕೆ ಮಾಡುವ ವಾಹನಗಳನ್ನು ವಿನಾಯಿತಿ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟ ತಿಳಿಸಿದೆ.

ಈ ಮಧ್ಯೆ ಹೈಕೋರ್ಟ್ ನಿಯಮವನ್ನು ಪಾಲಿಸಿ, ಉದ್ದೇಶಿತ ಮುಷ್ಕರವನ್ನು ಕೈಬಿಡುವಂತೆ ರಾಜ್ಯದ ಮುಖ್ಯ ಕಾರ್ಯದರ್ಶಿ ಸುಧಾಕರ ರಾವ್ ಲಾರಿ ಮಾಲಿಕರಿಗೆ ಹಾಗೂ ಇತರ ಖಾಸಗಿ ವಾಹನಗಳ ಮಾಲೀಕರಿಗೆ ಮನವಿ ಮಾಡಿದ್ದಾರೆ. ಈ ಮುಷ್ಕರದ ಬಿಸಿ ತಗ್ಗಿಸಲು ಸರ್ಕಾರ ಕೆಲವು ಸೂಕ್ತ ಕ್ರಮವನ್ನು ಕೈಗೊಂಡಿದ್ದು, ಬಸ್ಸುಗಳನ್ನು ಹೆಚ್ಚುವರಿಯಾಗಿ ಓಡಿಸಲು ನಿರ್ಧರಿಸಿದೆ. ಬಸ್ಸಿನ ಮೂಲಕ ಅಗತ್ಯವಸ್ತುಗಳ ಪೂರೈಕೆಯನ್ನು ಮಾಡಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ಮತ್ತಷ್ಟು
ಪುರಸಭೆ ಚುನಾವಣೆ : ಜೆಡಿಎಸ್ ಸದಸ್ಯರ ಅಪಹರಣ
ಲೋಕಸಭೆಯಲ್ಲಿ ಕರ್ನಾಟಕ ರಾಜ್ಯ ಬಜೆಟ್
ಉಗ್ರರ ತಾಣವಾಗುತ್ತಿರುವ ಸಿಲಿಕಾನ್ ಸಿಟಿ
ಮಾರ್ಚ ಆರರವರೆಗೆ ಪೊಲೀಸ್ ವಶಕ್ಕೆ ಯಾಹ್ಯಾ
ವಿಮಾನ ನಿಲ್ದಾಣದಲ್ಲಿ ಕರವೇ ದಾಂಧಲೆ
ಶಿವಮೊಗ್ಗ: ಎರಡೂ ಸ್ಥಾನಗಳು ಬಿಜೆಪಿಗೆ