ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫೆ.28ರಿಂದ ಕನ್ನಡ ಚಿತ್ರೋದ್ಯಮ ಬಂದ್
ರಿಮೇಕ್ ಸಿನಿಮಾಗಳಿಗೂ ತೆರಿಗೆ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ಫೆಬ್ರವರಿ 28ರಂದು ಕನ್ನಡ ಚಿತ್ರೋದ್ಯಮವು ಮುಷ್ಕರ ನಡೆಸಲು ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಪ್ರೊಡಕ್ಷನ್ ಕಾರ್ಯ ಸಂಪೂರ್ಣ ಸ್ಥಗಿತಗೊಳ್ಳಲಿದ್ದು, ಚಿತ್ರಪ್ರದರ್ಶನ ಮಾತ್ರ ಮುಂದುವರೆಯಲಿದೆ.

ಕನ್ನಡೇತರ ಸಿನಿಮಾಗಳ ಟಿಕೆಟ್ ದರದಲ್ಲಿ ತೆರಿಗೆ ವಿಧಿಸಲಾಗಿದ್ದು, ರಿಮೇಕ್ ಸಿನಿಮಾಗಳ ಮೇಲೂ ಇಷ್ಟೇ ತೆರಿಗೆ ವಿಧಿಸಿದೆ. ಆದರೆ ಮೂಲ ಕನ್ನಡ ಸಿನಿಮಾಗಳಿಗೆ ಶೇಕಡಾ ನೂರು ತೆರಿಗೆ ರಿಯಾಯಿತಿ ಇರುವುದನ್ನು ರಿಮೇಕ್ ಸಿನಿಮಾಗಳಿಗೂ ವಿಸ್ತರಿಸಬೇಕು ಎಂದು ಕರ್ನಾಟಕ ಫಿಲ್ಮ್ ಚೇಂಬರ್ ಒತ್ತಾಯಿಸಿದೆ.

ಇನ್ನೊಂದೆಡೆ ಈ ರಿಮೇಕ್ ಸಿನಿಮಾಗಳ ತೆರಿಗೆ ರಿಯಾಯಿತಿ ನೀಡುವ ಕುರಿತು ಪರ ಹಾಗೂ ವಿರೋಧ ಚರ್ಚೆಗಳು ನಡೆಯುತ್ತಲೇ ಇದೆ. ಆದರೆ ಇದರಿಂದ ಉದ್ಯಮದ ಅವನತಿಗೆ ಕಾರಣವಾಗುತ್ತದೆ ಎಂಬುದು ಕೆಲವು ನಿರ್ಮಾಪಕರು ಹಾಗೂ ನಿರ್ದೇಶಕರುಗಳ ಅಭಿಪ್ರಾಯ.

ಈ ಮಧ್ಯೆ ತಮಿಳು ಸಿನಿಮಾವೊಂದನ್ನು ಕನ್ನಡದಲ್ಲಿ ರಿಮೇಕ್ ಮಾಡಿದ್ದರೂ, ಅದನ್ನು ಸ್ವಮೇಕ್ ಎಂದು ಹೇಳಿ ನಿರ್ದೇಶಕರು ತೆರಿಗೆ ರಿಯಾಯಿತಿ ಹಕ್ಕನ್ನು ಪಡೆದುಕೊಂಡಿದ್ದಾರೆ ಎಂದು ತಮಿಳುನಾಡು ಫಿಲ್ಮ್ ಚೇಂಬರ್‌ಗೆ ಕರ್ನಾಟಕ ಫಿಲ್ಮ್ ಚೇಂಬರ್ ದೂರು ನೀಡಿತ್ತು. ಈ ಮಾಹಿತಿಯ ಮೇರೆಗೆ ಕರ್ನಾಟಕ ಸರಕಾರ ಈ ತೆರಿಗೆ ವಿನಾಯಿತಿಯನ್ನು ರದ್ದು ಪಡಿಸಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಮತ್ತಷ್ಟು
ವೇಗ ನಿಯಂತ್ರಕ: ನಾಳೆ ಸು.ಕೋ ತೀರ್ಪು
ವಿಮಾನ ನಿಲ್ದಾಣ ಉದ್ಘಾಟನೆಗೆ ತಡೆ :ಕರವೇ ಎಚ್ಚರಿಕೆ
ಫ್ಯಾಕ್ಟರಿಗೆ ಆಕಸ್ಮಿಕ ಬೆಂಕಿ:10ಲಕ್ಷ ರೂ. ಹಾನಿ
ಮುಷ್ಕರ ನಿಲ್ಲಿಸದಿದ್ದಲ್ಲಿ ಕಠಿಣ ಕ್ರಮ
ಹಾಕ್ ಯುದ್ಧ ವಿಮಾನ ವಾಯುಸೇನೆಗೆ ಸೇರ್ಪಡೆ
ವೇಗ ನಿಯಂತ್ರಕ ಕಡ್ಡಾಯ: ಸರಕು ಮೇಲೆ ಪರಿಣಾಮ