ಡಾ. ರಾಜ್ ಉದ್ಯಾನದಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದಿರುವುದನ್ನು ವಿರೋಧಿಸಿ ಹಿರಿಯ ಚಿತ್ರನಟ ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ನೂರಾರು ಮಂದಿ ಕಲಾವಿದರು ಪ್ರತಿಭಟನೆ ನಡೆಸಿದರು.
ಹನುಮಂತನಗರದ ಡಾ. ರಾಜ್ ಉದ್ಯಾನವನದಲ್ಲಿ ಧಿಮಾಕು ಚಿತ್ರದ ಚಿತ್ರೀಕರಣಕ್ಕೆ ಎರಡು ದಿನಗಳ ಅವಕಾಶವನ್ನು ಪಡೆದುಕೊಂಡಿದ್ದು, ಈ ಬಗ್ಗೆ ಒಪ್ಪಿಗೆಯೂ ದೊರೆತಿತ್ತು. ಈ ಸಂಬಂಧ ಇಂದು ಮತ್ತು ನಾಳೆ ಚಿತ್ರೀಕರಣ ನಡೆಸುವುದಕ್ಕಾಗಿ ಚಿತ್ರ ತಂಡ ಆಗಮಿಸಿತ್ತು.
ಆದರೆ ಕೊನೆ ಗಳಿಗೆಯಲ್ಲಿ ಉದ್ಯಾನವನದಲ್ಲಿನ ಹುಲ್ಲುಹಾಸು ಮರಗಿಡಗಳಿಗೆ ಚಿತ್ರೀಕರಣದಿಂದಾಗಿ ತೊಂದರೆಯಾಗುತ್ತದೆ ಎಂದು ಈ ಕ್ಷೇತ್ರದ ಮಾಜಿ ಶಾಸಕ ಚಂದ್ರಶೇಖರ್ ಚಿತ್ರತಂಡಕ್ಕೆ ಅನುಮತಿ ನೀಡಲು ನಿರಾಕರಿಸಿದರು.
ಇದನ್ನು ಖಂಡಿಸಿದ ಚಿತ್ರತಂಡ ಹಿರಿಯ ನಟ ಶ್ರೀನಿವಾಸ ಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಈ ಪ್ರತಿಭಟನೆಗೆ ಕರ್ನಾಟಕ ರಕ್ಷಣಾ ವೇದಿಕೆ ಬಣದ ಅಧ್ಯಕ್ಷ ನಾರಾಯಣ ಗೌಡ ಹಾಗೂ ಹಲವಾರು ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.
|