ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತ್ತೊಬ್ಬ ಉಗ್ರ ಪೊಲೀಸರ ಬಲೆಗೆ
ಇತ್ತೀಚೆಗೆ ನಗರದಲ್ಲಿ ಬಂಧನಕ್ಕೀಡಾಗಿರುವ ಸಿಮಿ ಉಗ್ರ ಯಾಹ್ಯಾನ ವಿಚಾರಣೆ ವೇಳೆ ಹೊರಬಿದ್ದಿರುವ ಮಾಹಿತಿಯಂತೆ ತೀವ್ರ ಶೋಧ ನಡೆಸಿರುವ ಸಿಓಡಿ ಪೊಲೀಸರು ಇನ್ನೊಬ್ಬ ಉಗ್ರನನ್ನು ಸೆರೆಹಿಡಿಯಿವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಇಂದು ಹುಬ್ಬಳ್ಳಿಗೆ ಕರೆದೊಯ್ಯುವ ನೀರೀಕ್ಷೆ ಇದೆ.

ನಗರದ ದೊಡ್ಡಮಾವಳ್ಳಿ ನಿವಾಸಿಯಾದ ಸಯ್ಯದ್ ಸಮೀರ್ ಎಂಬಾತನನ್ನು ನಿನ್ನೆ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಈತ ಮೆಕಾನಿಕಲ್ ಇಂಜಿನಿಯರ್ ಆಗಿದ್ದು, ಯಾಹ್ಯಾನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಎನ್ನಲಾಗಿದೆ.

ಬಂಧಿತ ಸಮೀರ್‌ನಿಂದ ಹೆಚ್ಚಿನ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಈತನನ್ನು ಸಿಓಡಿ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಅಲ್ಲದೆ, ಈಗಾಗಲೇ ರಾಜ್ಯಾದ್ಯಂತ ಯೋಜಿಸಿರುವ ಹಲವು ಸ್ಫೋಟಗಳನ್ನು ತಡೆ ಹಿಡಿಯುವಲ್ಲಿ ಯಶಸ್ವಿಯಾಗಿರುವ ಪೊಲೀಸರು ಇನ್ನೂ ಇವರೊಂದಿಗೆ ನಂಟು ಹೊಂದಿರುವವರ ತನಿಖೆಯನ್ನು ಮಾಡಬೇಕಿದೆ.

ಈಗಾಗಲೇ ಬಂಧಿಸಲಾಗಿರುವ ಉಗ್ರರಿಂದ ಸಾಕಷ್ಟು ಮಾಹಿತಿಗಳು ಲಭ್ಯವಾಗಿದ್ದವು. ಇವರೆಲ್ಲರಿಗೂ ಮೂಲ ಕಮಾಂಡೋ ಆಗಿ ಕಾರ್ಯ ನಿರ್ವಹಿಸುತ್ತಿರುವ ಅದ್ನಾನ್‌ನ ಹುಡುಕಾಟದಲ್ಲಿರುವ ಸಿಓಡಿ ಪೊಲೀಸರಿಗೆ ಈತ ಸೆರೆ ಸಿಕ್ಕಿದರೆ ಇನ್ನಷ್ಟು ಮಾಹಿತಿಗಳು ಲಭ್ಯವಾದಾವು.
ಮತ್ತಷ್ಟು
ರಾಜ್ ಪಾರ್ಕ್‌ನಲ್ಲಿ ಚಿತ್ರೀಕರಣಕ್ಕೆ ಅಡ್ಡಿ; ಪ್ರತಿಭಟನೆ
ಕೃಷ್ಣ ಮರುಪ್ರವೇಶಕ್ಕೆ ಯಾಕಿಷ್ಟು ಪ್ರಚಾರ: ಖರ್ಗೆ ಪ್ರಶ್ನೆ
ಕಾಂಗ್ರೆಸ್ ತಾಳಕ್ಕೆ ರಾಜ್ಯಪಾಲರ ಮೇಳ: ಯಡಿಯೂರ್
ದಾರಿತಪ್ಪಿದ್ದ ಶ್ರೀಶೈಲ ಯಾತ್ರಿಕರ ರಕ್ಷಣೆ
ಕ್ಯಾಬ್ ಸಂಘಟನೆ ಮುಷ್ಕರದಿಂದ ಹಿಂದಕ್ಕೆ
ಫೆ.28ರಿಂದ ಕನ್ನಡ ಚಿತ್ರೋದ್ಯಮ ಬಂದ್