ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಡವ ಅಕಾಡಮಿ ತನಿಖೆಗೆ ಆಗ್ರಹ
ಕೊಡವ ಸಾಹಿತ್ಯ ಅಕಾಡೆಮಿಯಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸೂಕ್ತ ತನಿಖೆಯಾಗಬೇಕೆಂದು 'ಕನ್ನಡ ನುಡಿ ಕನ್ನಡ ಗಡಿ' ಜಾಗೃತಿ ಜಾಥಾ ಸಮಿತಿಯ ಸಂಚಾಲಕ ಹಾಗೂ ವಿಧಾನ ಪರಿಷತ್ ಸದಸ್ಯ ಮುಖ್ಯಮಂತ್ರಿ ಚಂದ್ರು ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ್ ಪಾಟೀಲ್ ಅವರು ರಾಜ್ಯಪಾಲರನ್ನು ಆಗ್ರಹಿಸಿದ್ದಾರೆ.

ಕರ್ನಾಟಕ ಅಕಾಡೆಮಿಯಲ್ಲಿ ಕಪ್ಪುಚುಕ್ಕೆಯಾಗಿರುವ ಈ ಪ್ರಕರಣದಲ್ಲಿ ಸುಮಾರು 75ಲಕ್ಷರೂ.ನಷ್ಟು ಅವ್ಯವಹಾರ ನಡೆದಿದ್ದು, ಕೂಡಲೇ ಕೊಡವ ಸಾಹಿತ್ಯ ಅಕಾಡೆಮಿಯನ್ನು ವಿಸರ್ಜಿಸಬೇಕು ಹಾಗೂ ಅಕಾಡೆಮಿಯ ಅಧ್ಯಕ್ಷರಾಗಿರುವ ದಾಟಿ ಪೂವಯ್ಯರನ್ನು ಬಂಧಿಸಬೇಕು ಎಂದು ಅವರುಗಳು ಆಗ್ರಹಿಸಿದರು.

ವಿಶ್ವ ಕೊಡವ ಮೇಳ ನಡೆಸುವುದಾಗಿ ಲಕ್ಷಾಂತರ ರೂ. ವಸೂಲಿ ಮಾಡಿ ಅಕಾಡೆಮಿಗೆ ಜಮಾ ಮಾಡದೆ ದುರುಪಯೋಗ ಮಾಡಲಾಗಿದೆ. ಅಲ್ಲದೆ, ನಕಲಿ ವೋಚರ್ ಸೃಷ್ಟಿ ಮಾಡಲಾಗಿದೆ ಎಂದು ಚಂದ್ರು ಆರೋಪಿಸಿದರು. ಈ ಮಧ್ಯೆ ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರು ರಾಜೀನಾಮೆ ನೀಡಿದ್ದು, ಆ ಮೂಲಕ ಅಕಾಡೆಮಿಯ ವಿರುದ್ಧ ಪ್ರತಿಭಟಿಸಿದ್ದಾರೆ.

ಈ ಸಂದರ್ಭದಲ್ಲಿ ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ನೆನೆಗುದ್ದಿಗೆ ಬಿದ್ದಿರುವ ಕನ್ನಡ ಭವನ ನಿರ್ಮಾಣಕ್ಕೆ ಚಾಲನೆ ನೀಡಬೇಕೆಂದು ರಾಜ್ಯಪಾಲರಲ್ಲಿ ಚಂದ್ರು ಮನವಿ ಮಾಡಿದರು.
ಮತ್ತಷ್ಟು
ವೇಗ ನಿಯಂತ್ರಕಕ್ಕೆ ಸು.ಕೋ ತಡೆ
ಇಂದು ನಗರದಲ್ಲಿ ಜೆಡಿಎಸ್ ಕಾರ್ಯಕಾರಿಣಿ
ಮತ್ತೊಬ್ಬ ಉಗ್ರ ಪೊಲೀಸರ ಬಲೆಗೆ
ರಾಜ್ ಪಾರ್ಕ್‌ನಲ್ಲಿ ಚಿತ್ರೀಕರಣಕ್ಕೆ ಅಡ್ಡಿ; ಪ್ರತಿಭಟನೆ
ಕೃಷ್ಣ ಮರುಪ್ರವೇಶಕ್ಕೆ ಯಾಕಿಷ್ಟು ಪ್ರಚಾರ: ಖರ್ಗೆ ಪ್ರಶ್ನೆ
ಕಾಂಗ್ರೆಸ್ ತಾಳಕ್ಕೆ ರಾಜ್ಯಪಾಲರ ಮೇಳ: ಯಡಿಯೂರ್