ಕೇಂದ್ರ ಸರಕಾರವು ಕೇತ್ಷ ಮರುವಿಂಗಡಣೆ ಅಧಿಸೂಚನೆ ಹೊರಡಿಸಿದ್ದರೂ, ರಾಜ್ಯ ವಿಧಾನಸಭೆಗೆ ಮೇ ತಿಂಗಳಲ್ಲೇ ಚುನಾವಣೆ ನಡೆಸಲು ಒಲವು ತೋರಿಸಿದೆ. ಈ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳು ಕಂಡು ಬಂದಿದೆಯಾದರೂ, ಅಂತಿಮ ತೀರ್ಮಾನ ಇನ್ನಷ್ಟೆ ಹೊರಬೀಳಬೇಕಿದೆ.
ರಾಜ್ಯದಲ್ಲಿ ಜಾರಿಯಾಗಿರುವ ರಾಷ್ಟ್ರಪತಿ ಆಡಳಿತವನ್ನು ವಿಸ್ತರಿಸಲು ಅವಕಾಶ ನೀಡಬಾರದೆಂಬುದು ಚುನಾವಣಾ ಆಯೋಗದ ಅಭಿಪ್ರಾಯವಾಗಿದ್ದು, ಶೀಘ್ರ ಚುನಾವಣೆ ನಡೆಸುವಂತೆ ಆಗ್ರಹ ಮಾಡಿದೆ ಎಂದು ಚುನಾವಣಾ ಆಯೋಗದ ಮೂಲಗಳು ಹೇಳಿವೆ.
ಇನ್ನೊಂದು ಬೆಳವಣಿಗೆಯಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆಯಿಂದಾಗಿ ಉಳಿದಿರುವ ಅಗತ್ಯ ಕೆಲಸಗಳನ್ನು ಶೀಘ್ರವೇ ಪೂರೈಸುವಂತೆ ಕೇಂದ್ರ ಸೂಚಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯದ ಚುನಾವಣಾಧಿಕಾರಿಗಳು ಹಗಲು ರಾತ್ರಿಯೆನ್ನದೆ ಕಾರ್ಯನಿರ್ವಹಿಸುತ್ತಿರುವುದು ಶೀಘ್ರ ಚುನಾವಣೆಗೆ ಪುಷ್ಠಿ ನೀಡದೆ.
ಒಟ್ಟಿನಲ್ಲಿ ಮಾರ್ಚ್ 15ರ ವೇಳೆಗೆ ರಾಜ್ಯ ವಿಧಾನಸಭೆಗೆ ಚುನಾವಣೆ ದಿನಾಂಕದ ಸ್ಪಷ್ಟ ಚಿತ್ರಣ ಮೂಡಲಿರುವ ಹಿನ್ನೆಲೆಯಲ್ಲಿ ಈಗೀನಿಂದಲೇ ರಾಜ್ಯ ರಾಜಕೀಯ ವಲಯದಲ್ಲಿ ಬಿರುಸಿನ ಚಟುವಟಿಕೆ ಪ್ರಾರಂಭಗೊಂಡಿದೆ.
|