ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಲಾಲೂ ಹೇಳಿಕೆಗೆ ಕಿಡಿಕಾರಿದ ಗೌಡ
PTI
"ದೇವೇಗೌಡರನ್ನು ಪ್ರಧಾನಿಯಾಗಿಸಿದ್ದು ನಾನೇ" ಎಂಬ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಹೇಳಿಕೆ ಮತ್ತೊಂದು ವಿವಾದವನ್ನು ಹುಟ್ಟುಹಾಕಿದ್ದು, ಮಾಜಿ ಪ್ರಧಾನಿ ದೇವೇಗೌಡರು ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

"ಪ್ರಧಾನಿ ಮಂತ್ರಿ ಸ್ಥಾನವನ್ನು ಬಿಹಾರಿಗಳು ನೀಡಿದ್ದರೆ, ಸ್ಥಾನದಿಂದ ತನ್ನನ್ನು ಕೆಳಗಿಳಿಸಿದ್ದು ಬಿಹಾರಿಗಳೇ" ಎಂದು ದೇವೇಗೌಡ ಕಟುವಾಗಿ ನುಡಿದಿದ್ದಾರೆ. ಈ ಹಿಂದೆ ರಾಜ್ಯದ ಜನತೆಯನ್ನು 'ಕಚಡಾಮಂದಿ' ಎಂದಿದ್ದ ಲಾಲೂ ಈ ಕುರಿತು ಸಂಸದ ಅನಂತ ಕುಮಾರ್ ಸಂಸತ್ತಿನಲ್ಲಿ ಎತ್ತಿದ್ದ ಪ್ರಶ್ನೆಗೆ ಉತ್ತರಿಸುತ್ತಾ, ತನಗೆ ಕರ್ನಾಟಕದ ಜನತೆಯ ಮೇಲೆ ಗೌರವವಿದೆ, ಅದರಿಂದಾಗಿಯೇ ಕರ್ನಾಟಕದ ವ್ಯಕ್ತಿಯನ್ನು ಪ್ರಧಾನಿಯನ್ನಾಗಿಸಿದ್ದೆವು ಎಂದು ಹೇಳಿರುವುದು ಮತ್ತೊಂದು ವಿವಾದವಾಗುವ ಲಕ್ಷಣಗಳು ಕಾಣುತ್ತಿವೆ.

ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಬುಧವಾರ ಕಾರ್ಯಕರ್ತರ ಸಭೆಯ ಸಂದರ್ಭದಲ್ಲಿ ದೇವೇಗೌಡರು ಲಾಲೂ ಹೇಳಿಕೆಯನ್ನು ಖಂಡಿಸಿದರು. ಬಜೆಟ್‌ನಲ್ಲಿ ಲಾಲೂ ರಾಜ್ಯದ ಯೋಜನೆಗಳಿಗೆ ಆದ್ಯತೆ ನೀಡದೆ ಮತ್ತೊಮ್ಮೆ ಕರ್ನಾಟಕವನ್ನು ಕಡೆಗೆಣಿಸಿದ್ದಾರೆ ಎಂದು ಆರೋಪಿಸಿದರು.

ಮೇ ತಿಂಗಳಲ್ಲಿ ಚುನಾವಣೆ ನಡೆಯುವುದು ಬಹುತೇಕ ನಿಶ್ಚಿತವಾಗಿದ್ದರಿಂದ ಚುನಾವಣೆ ಅಖಾಡಕ್ಕೆ ಧುಮುಕಲು ಕಾರ್ಯಕರ್ತರಿಗೆ ದೇವೇಗೌಡರು ಈ ಸಂದರ್ಭದಲ್ಲಿ ಕರೆ ನೀಡಿದರು.
ಮತ್ತಷ್ಟು
ಹೊಗೇನಕಲ್: ಕನ್ನಡ ಸಂಘಗಳ ಪ್ರತಿಭಟನೆ
ಕಾಂಗ್ರೆಸ್ ನಾಯಕರ ದಂಡು ದೆಹಲಿಗೆ
ಕರ್ನಾಟಕಕ್ಕೆ ಲಾಲೂ ರೈಲಿಲ್ಲ
ದ್ವಿಚಕ್ರ ಸವಾರನ ಮೇಲೆ ಇನ್‌ಸ್ಪೆಕ್ಟರ್‌ ಹಲ್ಲೆ
ಮೇ ತಿಂಗಳಲ್ಲೇ ಚುನಾವಣೆ?
ಕೊಡವ ಅಕಾಡಮಿ ತನಿಖೆಗೆ ಆಗ್ರಹ