ರಾಜ್ಯದಲ್ಲಿ ಶೀಘ್ರವೇ ಚುನಾವಣೆ ಸಂಭವಿಸಿದಲ್ಲಿ ಸೋಲನುಭವಿಸುವ ಭೀತಿಯಿಂದ ಕಾಂಗ್ರೆಸ್ ಚುನಾವಣೆ ಮುಂದೂಡುವ ಹುನ್ನಾರ ನಡೆಸಿದೆ ಎಂದು ಬಿಜೆಪಿ ಹಿರಿಯ ಮುಖಂಡ ವೆಂಕಯ್ಯ ನಾಯ್ಡು ಆರೋಪಿಸಿದ್ದಾರೆ.
ಬುಧವಾರ ನಗರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಪತಿ ಆಡಳಿತವಿರುವುದರಿಂದ ಮೇ ಅಂತ್ಯದೊಳಗೆ ವಿಧಾನಸಭಾ ಚುನಾವಣೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ರೈಲ್ವೆ ಬಜೆಟ್ ಕುರಿತು ಪ್ರಸ್ತಾಪಿಸಿದ ಅವರು, ಐದು ವರ್ಷ ಸಾಧನೆ ಕುರಿತು ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಶ್ವೇತ ಪತ್ರ ಹೊರಡಿಸಲಿ ಎಂದ ನಾಯ್ಡು, ರೈಲ್ವೆ ಬಜೆಟ್ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ಬಜೆಟ್ ಜನಾಕರ್ಷಕ-ಆದರೆ ಜನಪರವಲ್ಲ ಎಂದ ಅವರು, ಕರ್ನಾಟಕಕ್ಕೆ ಬಜೆಟ್‌ನಲ್ಲಿ ಸಚಿವರು ಯಾವುದೇ ಪ್ರಮುಖ ಹಾಗೂ ಅಗತ್ಯ ಯೋಜನೆಯನ್ನು ತರುವಲ್ಲಿ ವಿಫಲವಾಗಿದ್ದಾರೆ ಎಂದು ದೂರಿದರು.
|