ನಗರದಲ್ಲಿ ಬಂಧನಕ್ಕೀಡಾಗಿರುವ ಸಿಮಿ ಉಗ್ರ ಯಾಹ್ಯಾಖಾನ್ ವಿಚಾರಣೆ ನಡೆಸುತ್ತಿರುವ ಸಿಓಡಿ ಪೊಲೀಸರಿಗೆ, ಈತ ಮೂರು ವರ್ಷಗಳ ಹಿಂದೆ ಮೀಟಾ ಅನ್ನುವ ಭಯೋತ್ಪಾದಕ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದ ಎಂಬ ಆಘಾತಕಾರಿ ಅಂಶ ಗೊತ್ತಾಗಿದೆ.
ಇದಲ್ಲದೆ, ಇನ್ನಿತರ ಮಹತ್ವದ ಮಾಹಿತಿಗಳು ಬಹಿರಂಗಗೊಂಡಿದ್ದು, ಈತನೊಂದಿಗೆ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಸಹಚರರ ಹೆಸರುಗಳನ್ನು ಬಹಿರಂಗಗೊಳಿಸಿದ್ದಾನೆ.
ಮೀಟಾ ಸಂಸ್ಥೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಸದಸ್ಯರು ಭಾಗವಹಿಸುತ್ತಿದ್ದರು. ಬಹಳಷ್ಟು ಮಂದಿ ಕೇರಳ ಮೂಲದ ವ್ಯಕ್ತಿಗಳು ಸಭೆಗೆ ಹಾಜರಾಗುತ್ತಿದ್ದರು ಎಂಬ ಆಘಾತಕಾರಿ ಅಂಶವನ್ನು ಯಾಹ್ಯಾಖಾನ್ ತಿಳಿಸಿದ್ದಾನೆ.
ಅಲ್ಲದೆ, ಯಾಹ್ಯಾಖಾನ್ ಎಲ್ಇಟಿ ಹಾಗೂ ಸಿಮಿ ಸಂಘಟನೆಯೊಂದಿಗೆ ನೇರವಾಗಿ ಸಂಪರ್ಕ ಹೊಂದಿದ್ದು, ಆ ಮೂಲಕ ದೇಶದಲ್ಲಿ ಹಿಂಸಾತ್ಮಕ ಕೃತ್ಯಗಳಿಗೆ ಯೋಜನೆ ರೂಪಿಸುತ್ತಿದ್ದ ಎಂದು ಗೊತ್ತಾಗಿದೆ. ಈ ಮಧ್ಯೆ ಉಗ್ರರಿಂದ ಇನ್ನಷ್ಟು ಮಾಹಿತಿಯನ್ನು ಕಲೆ ಹಾಕುವ ನಿಟ್ಟಿನಲ್ಲಿ ಮಂಪರು ಪರೀಕ್ಷೆಗೆ ಒಳಪಡಿಸಲು ಸಿಓಡಿ ನಿರ್ಧರಿಸಿದೆ.
ಯಾಹ್ಯಾ ತಾನು ದುಡಿದು ಸಂಪಾದಿಸಿರುವ ಹಣದಲ್ಲಿ ಶೇಕಡ 10ರಷ್ಟನ್ನು ಭಯೋತ್ಪಾದನೆ ಕಾರ್ಯಗಳಿಗೆ ಮೀಸಲಿಟಿದ್ದನು. ಮೂಲತಃ ಕೇರಳದವನಾದ ಅಲ್ಲದೆ, ಈ ಮಧ್ಯೆ ಕೆಲ ಮುಸ್ಲಿಂ ಸಾಫ್ಟೆವೇರ್ ಇಂಜಿನಿಯರಿಂಗ್ ಕೂಟವನ್ನು ಕೂಡ ಹುಟ್ಟುಹಾಕಿರುವ ಬಗ್ಗೆ ವಿಚಾರಣೆ ವೇಳೆ ಯಾಹ್ಯಾ ಸಿಓಡಿ ಪೊಲೀಸರಿಗೆ ತಿಳಿಸಿದ್ದಾನೆ.
|