ನ್ಯಾಯಾಲಯದಲ್ಲಿ ನ್ಯಾಯಾಧೀಶರ ಪ್ರಶ್ನೆಯಿಂದ ಕುಪಿತಗೊಂಡ ಆರೋಪಿಯೊಬ್ಬ ನ್ಯಾಯಾಧೀಶರ ಮೇಲೆಯೇ ಚಪ್ಪಲಿ ಎಸೆದ ವಿಲಕ್ಷಣ ಘಟನೆ ಹುಬ್ಬಳ್ಳಿ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಸಂಭವಿಸಿದೆ.
ಕಳ್ಳಿಗುಡ್ಡ ವಿಶ್ವನಾಥ್ ಎಂಬಾತನನ್ನು ಕಳ್ಳತನ ಆರೋಪದ ಮೇಲೆ ಬಂಧಿಸಲಾಗಿತ್ತು. ಹುಬ್ಬಳ್ಳಿಯ ಸ್ಥಳೀಯ ನ್ಯಾಯಾಲಯದಲ್ಲಿ ಈತನ ವಿಚಾರಣೆ ನಡೆಸಿದ ವೇಳೆ ನ್ಯಾಯಾಧೀಶರ ಪ್ರಶ್ನೆಯೊಂದು ಆರೋಪಿಯನ್ನು ಕೆರಳಿಸಿತ್ತು. ಆಕ್ರೋಶಗೊಂಡ ಈತ ನ್ಯಾಯಾಲಯದಲ್ಲಿ ಎಲ್ಲರೂ ನೋಡುತ್ತಿರುವಂತೆಯೇ ತನ್ನ ಚಪ್ಪಲಿಯನ್ನು ಕೈಗೆತ್ತಿ ನ್ಯಾಯಾಧೀಶರ ಮುಖಕ್ಕೆ ಎಸೆದ.
ಏನಾಗುತ್ತಿದೆಯೆಂದು ನೋಡುತ್ತಿರುವಂತೆಯೇ ಕ್ಷಣಾರ್ಧದಲ್ಲಿ ಈ ಘಟನೆ ಜರುಗಿದ್ದು ಸ್ಥಳದಲ್ಲಿ ಇದ್ದವರೆಲ್ಲ ಮೂಕ ಪ್ರೇಕ್ಷಕರಾಗಬೇಕಾಯಿತು.
ಮೊದಲೆ ಆರೋಪ ಹೊತ್ತು ಬಂಧನಕ್ಕೀಡಾಗಿದ್ದ ವಿಶ್ವನಾಥ್ ಮೇಲೆ ಈಗ ಇನ್ನೊಂದು ಪ್ರಕರಣ ದಾಖಲಾಗಿದೆ. ಇಷ್ಟಕ್ಕೂ ಈತನಿಗೆ ಚಪ್ಪಲಿ ಎಸೆಯುವಷ್ಟು ಕೋಪ ಬರಿಸಲು ನ್ಯಾಯಾಧೀಶರು ಕೇಳಿದ ಪ್ರಶ್ನೆ ಯಾವುದು ಎಂಬುದು ತಕ್ಷಣಕ್ಕೆ ಗೊತ್ತಾಗಿಲ್ಲ.
|