ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪುನಾರಚನೆ: ಖರ್ಗೆ ಹುದ್ದೆ ಅಬಾಧಿತ
PTI
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಪುನಾರಚನೆಗೆ ಹೈಕಮಾಂಡ್ ನಿರ್ಧರಿಸಿದ್ದು, ಸದ್ಯವೇ ಪುನಾರಚನೆಯಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೇ ತಿಂಗಳಲ್ಲಿಯೇ ಚುನಾವಣೆ ನಡೆಸುವ ಇಂಗಿತವನ್ನು ಕೇಂದ್ರ ಚುನಾವಣಾ ಆಯೋಗವು ವ್ಯಕ್ತಪಡಿಸಿರುವುದರಿಂದ ಈ ಪ್ರಕ್ರಿಯೆ ನಡೆಯಲಿದ್ದರೂ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಸ್ಥಾನ ಅಬಾಧಿತವಾಗಿ ಮುಂದುವರೆಯಲಿದೆ ಎಂದು ಹೇಳಲಾಗಿದೆ.

ರಾಜ್ಯದಲ್ಲಿ ಬಹುಜನ ಸಮಾಜವಾದಿ ಪಕ್ಷ ದಿನೇ ದಿನೇ ಬಲಿಷ್ಠವಾಗುತ್ತಿರುವುದರಿಂದ ಹಾಗೂ ಶಿವಮೊಗ್ಗ ವಲಯದಲ್ಲಿ ಸಮಾಜವಾದಿ ಪಕ್ಷವೂ ನೆಲೆ ಕಂಡುಕೊಳ್ಳುತ್ತಿರುವುದರಿಂದ ಖರ್ಗೆಯವರನ್ನು ಬದಲಾಯಿಸುವ ಮೂಲಕ ಒಂದು ವರ್ಗದ ಮತಬ್ಯಾಂಕನ್ನು ಕಳೆದುಕೊಳ್ಳುವುದು ಬೇಡ ಎಂಬ ದೂರದೃಷ್ಟಿಯನ್ನಿಟ್ಟುಕೊಂಡು ಈ ನಿರ್ಧಾರ ತಳೆಯಲಾಗಿದೆ ಎಂದು ತಿಳಿದುಬಂದಿದೆ.

ಮಾರ್ಚ್ ಮೊದಲ ವಾರದಲ್ಲಿ ರಾಜ್ಯಕ್ಕೆ ಭೇಟಿ ನೀಡಲಿರುವ ಪೃಥ್ವಿರಾಜ್ ಚವಾಣ್ ಸಮ್ಮುಖದಲ್ಲಿ ಪುನಾರಚನೆ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಮಾರ್ಚ್ ಅಂತ್ಯದಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಗೆಂದು ಪ್ರಧಾನಿ ಮನಮೋಹನ್ ಸಿಂಗ್ ನಗರಕ್ಕೆ ಭೇಟಿ ನೀಡುವ ಸಂದರ್ಭದಲ್ಲಿ ಪಕ್ಷದ ಬಹಿರಂಗ ಸಭೆಗಳು ನಡೆಯಲಿದ್ದು ಇವು ಪಕ್ಷದ ಇಮೇಜ್ ಹೆಚ್ಚಿಸುವ ದೃಷ್ಟಿಯಿಂದ ಮತ್ತು ಸಂಘಟನೆಯ ದೃಷ್ಟಿಯಿಂದ ನೆರವಾಗಲಿದೆ ಎಂಬುದು ಸ್ಥಳೀಯರ ಲೆಕ್ಕಾಚಾರ.

ಆದರೆ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣರಿಗೆ ಯಾವ ಜವಾಬ್ದಾರಿಯನ್ನು ನೀಡಲಾಗುವುದು ಎಂಬ ಕುರಿತು ಪಕ್ಷದ ಕೆಲ ನಾಯಕರು ಪ್ರತಿಕ್ರಿಯೆ ವ್ಯಕ್ತಪಡಿಸಲು ನಿರಾಕರಿಸಿದ್ದಾರೆ. ಈ ಮಾಹಿತಿಯೂ ಹೈಕಮಾಂಡ್‌ನಿಂದಲೇ ಬರಲಿ ಎಂಬುದು ಅವರ ಸ್ಪಷ್ಟ ನಿರ್ಧಾರ.
ಮತ್ತಷ್ಟು
ಚುನಾವಣೆ: ಒಂದೆಡೆ ಪುಳಕ, ಇನ್ನೊಂದೆಡೆ ನಡುಕ
ಮಾರ್ಚ್23ಕ್ಕೆ ರೈಲ್ವೆ ಬಜೆಟ್ ವಿರುದ್ಧ ಪ್ರತಿಭಟನೆ
ಯಡಿಯೂರಪ್ಪ 66ನೇ ಹುಟ್ಟುಹಬ್ಬ
ನ್ಯಾಯಾಧೀಶರಿಗೇ ಚಪ್ಪಲಿ ಎಸೆದ ಭೂಪ!
ಮೀಟಾ ಭಯೋತ್ಪಾದಕ ಸಂಸ್ಥೆ ಹುಟ್ಟುಹಾಕಿದ್ದ ಯಾಹ್ಯಾ
ಮೇ ಅಂತ್ಯದೊಳಗೆ ಚುನಾವಣೆಗೆ ನಾಯ್ಡು ಆಗ್ರಹ