ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೆಟ್ರೋ: ವಾಸ್ತವಾಂಶಕ್ಕೆ ಹೈ.ಕೋ ಆದೇಶ
ಮೆಟ್ರೋ ರೈಲು ಕಾಮಗಾರಿಯ ಸ್ಥಿತಿಗತಿ, ಪ್ರಗತಿ ಇತ್ಯಾದಿ ವಿಷಯಗಳ ಕುರಿತು ವಾಸ್ತವಾಂಶದ ವರದಿ ಸಲ್ಲಿಸಲು ಕರ್ನಾಟಕ ಹೈಕೋರ್ಟ್ ಸರಕಾರಕ್ಕೆ ಆದೇಶ ನೀಡಿದೆ.

ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ನೀಡಿದೆ.

ಮೆಟ್ರೋ ಕಾಮಗಾರಿಯ ರೂಪುರೇಷೆಗಳು ಪ್ರಕಟವಾದಾಗ ಇಂದಿರಾನಗರದ ಸಿಎಂಎಚ್ ರಸ್ತೆಯ ವ್ಯಾಪಾರಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಯಾವುದೇ ಯೋಜನೆಯನ್ನು ಅನುಷ್ಠಾನಗೊಳಿಸುವುದಕ್ಕೆ ಮುಂಚಿತವಾಗಿ ಅದಕ್ಕೆ ಕಾನೂನಿನ ಕ್ರಮಬದ್ಧತೆ ಇರಬೇಕು. ಆದರೆ ಮೆಟ್ರೋಗೆ ಕಾನೂನಿನ ಅಂಶಗಳೇ ತೊಡಕಾಗಿರುವುದರಿಂದ ಈ ಯೋಜನೆ ಅಸಿಂಧು ಎಂಬುದಾಗಿ ಅರ್ಜಿದಾರರ ಪರವಾಗಿ ವಾದ ಮಂಡಿಸಲಾಗಿತ್ತು.

ಈ ಕುರಿತು ಸರಕಾರದ ಪರ ತಮ್ಮ ವಾದ ಮಂಡಿಸಿದ ವಕೀಲ ಬಿ.ವಿ.ಆಚಾರ್ಯರವರು ಭಾರತದಲ್ಲಿ ಈಗ ಅಸ್ತಿತ್ವದಲ್ಲಿರುವ ಟ್ರಾಮ್‌ವೇ ಕಾಯ್ದೆಯಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಅದ್ದರಿಂದ ಇದು ಅಸಿಂಧುವಲ್ಲ ಎಂದು ವಾದಿಸಿದ್ದರು. ಆದರೆ, ಬ್ರಿಟಿಷರ ಕಾಲದಲ್ಲಿ ರಚಿತವಾದ ಈ ಕಾಯ್ದೆ ಸದ್ಯದ ಪರಿಸ್ಥಿತಿಗೆ ಹೊಂದಿಕೊಳ್ಳುವುದಿಲ್ಲ, ವಸ್ತು ಸ್ಥಿತಿಯನ್ನಾಧರಿಸಿ ಯೋಜನೆ ಅನುಷ್ಠಾನ ಮಾಡಬೇಕಾಗುತ್ತದೆ ಇದಕ್ಕೆ ಪ್ರತಿವಾದ ಮಂಡಿಸಲಾಯಿತು.

ವಾದಸರಣಿಯನ್ನು ಆಲಿಸಿದ ನ್ಯಾಯಪೀಠ ಮಾರ್ಚ್ 10ರವರೆಗೆ ಸರಕಾರಕ್ಕೆ ಗಡುವು ನೀಡಿದ್ದು ವಾಸ್ತವಾಂಶಗಳಿಂದ ಕೂಡಿದ ವರದಿ ಸಲ್ಲಿಸಲು ಆದೇಶ ನೀಡಿದೆ.
ಮತ್ತಷ್ಟು
ಇಬ್ರಾಹಿಂ ಬಿಜೆಪಿಗೆ; ಬಂಗಾರಪ್ಪ ಕಾಂಗ್ರೆಸ್‌ಗೆ?
ಪುನಾರಚನೆ: ಖರ್ಗೆ ಹುದ್ದೆ ಅಬಾಧಿತ
ಚುನಾವಣೆ: ಒಂದೆಡೆ ಪುಳಕ, ಇನ್ನೊಂದೆಡೆ ನಡುಕ
ಮಾರ್ಚ್23ಕ್ಕೆ ರೈಲ್ವೆ ಬಜೆಟ್ ವಿರುದ್ಧ ಪ್ರತಿಭಟನೆ
ಯಡಿಯೂರಪ್ಪ 66ನೇ ಹುಟ್ಟುಹಬ್ಬ
ನ್ಯಾಯಾಧೀಶರಿಗೇ ಚಪ್ಪಲಿ ಎಸೆದ ಭೂಪ!