ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಳಬಾಗಿಲು ನಂಗಾನಾಚ್: ಸ್ಥಳೀಯರ ಆಕ್ರೋಶ
ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಕಾಶಿ ವಿಶ್ವನಾಥ ಸ್ವಾಮಿಯ ಜಾತ್ರೆಯ ಸಂದರ್ಭದಲ್ಲಿ ನಡೆಸಲಾಗಿರುವ ಹೆಣ್ಣುಮಕ್ಕಳ ನಂಗಾನಾಚ್ ಕಾರ್ಯಕ್ರಮ ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹುಟ್ಟಿಸಿದೆ.

ಅಂಧ್ರದ ಗಡಿಭಾಗದಿಂದ ಇದಕ್ಕೆಂದೇ ನರ್ತಕಿಯರನ್ನು ಕರೆತಂದು ಜಾತ್ರೆ-ರಥೋತ್ಸವಗಳ ವೇಳೆ ತೀರಾ ಅಸಭ್ಯವಾಗಿ ನೃತ್ಯ ಮಾಡಿಸಿರುವ ಆಯೋಜಕರ ನಡವಳಿಕೆಗೆ ಸ್ಥಳೀಯರು ತೀವರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಮಾರು ವರ್ಷಗಳಿಂದ ಈ ನಂಗಾನಾಚ್ ಅವ್ಯಾಹತವಾಗಿ ನಡೆದು ಬಂದಿದ್ದರೂ ಯಾರೂ ಕೇಳುವವರಿಲ್ಲ. ಕೆಲವರು ಸಂಸಾರ ಸಮೇತರಾಗಿ ಈ ಅಶ್ಲೀಲ ನೃತ್ಯವನ್ನು ವೀಕ್ಷಿಸುವುದು ಅಸಹ್ಯವಾಗಿದ್ದರೂ, ಪೊಲೀಸರು ಈ ಸಂದರ್ಭದಲ್ಲಿ ಮೂಕಪ್ರೇಕ್ಷಕರಾಗಿದ್ದರು ಎಂದು ತಿಳಿದುಬಂದಿದೆ.

ಅಶ್ಲೀಲ ನೃತ್ಯಗಳಿಂದ ಶುರುವಾಗಿ, ಕ್ರಮೇಣ ಕೋಳಿ ಕಟ್ಟ, ಜೂಜಾಟ ಇತ್ಯಾದಿಗಳೆಲ್ಲವೂ ಸದರಿ ಜತ್ರೆಯಲ್ಲಿ ನಡೆದಿವೆ. ಈ ಅಸಭ್ಯ ನೃತ್ಯ ಪ್ರದರ್ಶನ ಅಸಹನೀಯವಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಮೆಟ್ರೋ: ವಾಸ್ತವಾಂಶಕ್ಕೆ ಹೈ.ಕೋ ಆದೇಶ
ಇಬ್ರಾಹಿಂ ಬಿಜೆಪಿಗೆ; ಬಂಗಾರಪ್ಪ ಕಾಂಗ್ರೆಸ್‌ಗೆ?
ಪುನಾರಚನೆ: ಖರ್ಗೆ ಹುದ್ದೆ ಅಬಾಧಿತ
ಚುನಾವಣೆ: ಒಂದೆಡೆ ಪುಳಕ, ಇನ್ನೊಂದೆಡೆ ನಡುಕ
ಮಾರ್ಚ್23ಕ್ಕೆ ರೈಲ್ವೆ ಬಜೆಟ್ ವಿರುದ್ಧ ಪ್ರತಿಭಟನೆ
ಯಡಿಯೂರಪ್ಪ 66ನೇ ಹುಟ್ಟುಹಬ್ಬ