ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹೊಗೇನಕಲ್ ಯೋಜನೆ ವಿರುದ್ಧ ಬಿಜೆಪಿ ಎಚ್ಚರಿಕೆ
ರಾಜ್ಯದ ಗಡಿ ಪ್ರದೇಶದಲ್ಲಿರುವ ಹೊಗೇನಕಲ್‌ನಲ್ಲಿ ತಮಿಳುನಾಡು ಸರಕಾರ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಯ ಕಾಮಗಾರಿಯನ್ನು ನಿಲ್ಲಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ರಾಜ್ಯ ಬಿಜೆಪಿ ಎಚ್ಚಿರಿಸಿದೆ.

ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಬಸವರಾಜ ಬೊಮ್ಮಾಯಿಯವರು ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡುತ್ತಾ, ಕಾವೇರಿ ವಿವಾದ ಇನ್ನೂ ಬಗೆಹರಿಯದಿರುವ ಸನ್ನಿವೇಶದಲ್ಲಿ ತಮಿಳುನಾಡು ಸರಕಾರ ಇಂಥಾ ದುಸ್ಸಾಹಸಕ್ಕೆ ಕೈಹಾಕಿದೆ. ಇದಕ್ಕೂ ಮೇಲಾಗಿ ಕೇಂದ್ರ ಸರಕಾರ ಮತ್ತು ಕಾವೇರಿ ನ್ಯಾಯಾಧಿಕರಣದ ಅನುಮತಿಯನ್ನೂ ಸಹ ಅದು ಪಡೆದಿಲ್ಲ. ಈ ಕುರಿತು ಕೇಂದ್ರ ಸರಕಾರ ಕಣ್ಣುಮುಚ್ಚಿ ಕೂತಿರುವುದು ಖಂಡನೀಯ ಎಂದರು.

ತಮಿಳುನಾಡು ಸರಕಾರದ ಇಂಥ ಕ್ರಮವನ್ನು ಕಂಡೂ ರಾಜ್ಯದ ಕಾಂಗ್ರೆಸ್ಸಿಗರು ರಾಜ್ಯದ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದ ಈ ನಾಯಕರು, ರಾಜ್ಯಪಾಲ ರಾಮೇಶ್ವರ ಠಾಕೂರ್ರವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ವಾಪಸ್ ತೆರಳುವುದು ಸೂಕ್ತ ಎಂದು ಟೀಕಿಸಿದರು.

ಯಾವುದೇ ಕಾರಣಕ್ಕೂ ಈ ನೀರಿನ ಯೋಜನೆಯ ಅನುಷ್ಠಾನಕ್ಕೆ ಅವಕಾಶ ಕೊಡುವುದಿಲ್ಲ ಎಂದ ಅವರು ಸದ್ಯದಲ್ಲಿಯೇ ಬಿಜೆಪಿಯ ನಿಯೋಗವೊಂದು ರಾಷ್ಟ್ರಪತಿ, ಪ್ರಧಾನ ಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಬಳಿಗೆ ತೆರಳಿ ರಾಜ್ಯಕ್ಕಾಗಿರುವ ಅನ್ಯಾಯದ ಕುರಿತು ಮನದಟ್ಟು ಮಾಡಿಕೊಡಲಿದೆ ಎಂದು ತಿಳಿಸಿದರು.
ಮತ್ತಷ್ಟು
ಹೊಗೇನಕಲ್: ಕೇಂದ್ರಕ್ಕೆ ಪತ್ರ
ಮುಳಬಾಗಿಲು ನಂಗಾನಾಚ್: ಸ್ಥಳೀಯರ ಆಕ್ರೋಶ
ಮೆಟ್ರೋ: ವಾಸ್ತವಾಂಶಕ್ಕೆ ಹೈ.ಕೋ ಆದೇಶ
ಇಬ್ರಾಹಿಂ ಬಿಜೆಪಿಗೆ; ಬಂಗಾರಪ್ಪ ಕಾಂಗ್ರೆಸ್‌ಗೆ?
ಪುನಾರಚನೆ: ಖರ್ಗೆ ಹುದ್ದೆ ಅಬಾಧಿತ
ಚುನಾವಣೆ: ಒಂದೆಡೆ ಪುಳಕ, ಇನ್ನೊಂದೆಡೆ ನಡುಕ