ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದಾಳಿ ಭೀತಿ: ಸಿದ್ದಾರೂಢ ಮಠಕ್ಕೆ ಭದ್ರತೆ
ಉಡುಪಿಯ ಕೃಷ್ಣಮಠದ ಸ್ಫೋಟಕ್ಕೆ ಭಯೋತ್ಪಾದಕರು ಸಂಚು ಹೂಡಿದ್ದರು ಎಂಬ ಸುದ್ದಿ ಮಸುಕಾಗುವ ಮುನ್ನವೇ ಮತ್ತೊಂದು ಅಂಥದೇ ಆತಂಕಕಾರಿ ಸುದ್ದಿ ಹುಬ್ಬಳ್ಳಿಯಿಂದ ವರದಿಯಾಗಿದೆ.

ಇಲ್ಲಿನ ಸುಪ್ರಸಿದ್ಧ ಸದ್ಗುರು ಸಿದ್ದಾರೂಢ ಮಠದ ಮೇಲೆ ಉಗ್ರರು ದಾಳಿ ನಡೆಸಲು ಸಂಚು ಹೂಡಿದ್ದರು ಎಂಬ ವಿಷಯ ಹೊರಬಿದ್ದಿದ್ದು ಈಗ ಮಠಕ್ಕೆ ಬಿಗಿಭದ್ರತೆ ಒದಗಿಸಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

ಮಠದ ಟ್ರಸ್ಟ್‌ನ ಚೇರ್ಮನ್ ಬಾಳು ಮಗಜಿಕೊಂಡಿರವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿ, ಈಗ ಶ್ರೀಮಠದ ಸುರಕ್ಷತೆಗೆ ಯಾವುದೇ ಧಕ್ಕೆ ಬರದಂತೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರೂ ಸಹ ಎಂದಿನಂತೆ ಮಠಕ್ಕೆ ಭೇಟಿ ನೀಡಬಹುದು ಎಂದು ತಿಳಿಸಿದ್ದಾರೆ.

ಮಠದ ಭದ್ರತಾ ಸಿಬ್ಬಂದಿಯಷ್ಟೇ ಅಲ್ಲದೇ, ಮಠದ ಆವರಣದಲ್ಲಿ ಪೊಲೀಸ್ ಕಾವಲು ಹಾಗೂ ಮಫ್ತಿಯಲ್ಲಿರುವ ಸಿಬ್ಬಂದಿಯನ್ನು ವ್ಯವಸ್ಥೆಗೊಳಿಸಲಾಗಿದೆ. ಜೊತೆಗೆ ಅನುಮಾನಾಸ್ಪದ ವ್ಯಕ್ತಿಗಳ ಮೇಲೆ ಕಣ್ಣಿಡುವಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ.
ಮತ್ತಷ್ಟು
ರಾಜಕೀಯ ಇಚ್ಛಾಶಕ್ತಿ ಅಗತ್ಯ: ಚಂಪಾ
ಹೊಗೇನಕಲ್ ಯೋಜನೆ ವಿರುದ್ಧ ಬಿಜೆಪಿ ಎಚ್ಚರಿಕೆ
ಹೊಗೇನಕಲ್: ಕೇಂದ್ರಕ್ಕೆ ಪತ್ರ
ಮುಳಬಾಗಿಲು ನಂಗಾನಾಚ್: ಸ್ಥಳೀಯರ ಆಕ್ರೋಶ
ಮೆಟ್ರೋ: ವಾಸ್ತವಾಂಶಕ್ಕೆ ಹೈ.ಕೋ ಆದೇಶ
ಇಬ್ರಾಹಿಂ ಬಿಜೆಪಿಗೆ; ಬಂಗಾರಪ್ಪ ಕಾಂಗ್ರೆಸ್‌ಗೆ?