ನಿಯಮ ಉಲ್ಲಂಫಿಸಿ ನೇಮಕವಾಗಿರುವ ಏಳು ಸಾವಿರಕ್ಕೂ ಅಧಿಕ ಅಂಗನವಾಡಿ ಕಾರ್ಯಕರ್ತೆಯರ ನೇಮಕವನ್ನು ಹೈಕೋರ್ಟ್ ರದ್ದು ಪಡಿಸಿದೆ.
ಕೇಂದ್ರದ ನಿಯಮವನ್ನು ಉಲ್ಲಂಘಿಸಿ ರಾಜ್ಯ ಸರಕಾರ ಸುಮಾರು 7 ಸಾವಿರ ಅಂಗನವಾಡಿ ಕಾರ್ಯಕರ್ತೆಯರ ನೇಮಕವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಪರೀಶೀಲಿಸಿದ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ. ಇದರಿಂದ ಸುಮಾರು 7,194 ಅಂಗನವಾಡಿ ಕಾರ್ಯಕರ್ತೆಯರು ಹುದ್ದೆಗೆ ಸಂಚಾಕಾರ ಒದಗಿದ್ದು ಅತಂತ್ರ ಸ್ಥಿತಿ ನಿರ್ಮಾಣವಾಗಿದೆ.
ಸಮಗ್ರ ಶಿಶು ಕಲ್ಯಾಣ ಯೋಜನೆ(ಐಸಿಡಿಎಸ್)ಯಲ್ಲಿ ಅಂಗನವಾಡಿ ನೇಮಕದ ಹಕ್ಕನ್ನು ಸ್ಥಳೀಯ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಕೇಂದ್ರ ಸರಕಾರ ನೀಡಿತ್ತಾದರೂ, ಈ ನಿಯಮವನ್ನು ಉಲ್ಲಂಘಿಸಲಾಗಿದೆ. ಇದು ಕಾನೂನು ಬಾಹಿರವಾಗಿದ್ದು, ನೇಮಕಗಳನ್ನು ಶೀಘ್ರವೇ ರದ್ದು ಪಡಿಸಲು ಹೈಕೊರ್ಟ್ ಆದೇಶ ನೀಡಿದೆ.
ಹಲವಾರು ಕಾರ್ಯಕರ್ತೆಯರಿಗೆ ಜೀವನಾಧಾರವಾಗಿದ್ದ ಈ ಹುದ್ದೆ ಹೈಕೋರ್ಟ್ ದಿಢೀರ್ ಆದೇಶದಿಂದ ಆತಂಕ್ಕೆ ಕಾರಣವಾಗಿದ್ದು, ಮುಂದೇನು ಅನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.
|