ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗೌಡರ ಪ್ರತಿಕ್ರಿಯೆಗೆ ವಿಶ್ವನಾಥ್ ಕಿಡಿ
ಕೇಂದ್ರ ಹಣಕಾಸು ಸಚಿವ ಚಿದಂಬರಂ ಸಂಸತ್ತಿನಲ್ಲಿ ಶನಿವಾರ ಮಂಡಿಸಿರುವ ಬಜೆಟ್ ಜನಪರ ಕಾಳಜಿಯನ್ನು ಹೊಂದಿಲ್ಲ ಎಂದಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಮಾತಿಗೆ ಪ್ರತಿಯಾಗಿ ಮಾಜಿ ಸಚಿವ ಎಚ್. ವಿಶ್ವನಾಥ್ ಕಿಡಿ ಕಾರಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್ ಸಾರಾಂಶವನ್ನು ಓದದೆ ಮಾತನಾಡುತ್ತಿದ್ದಾರೆ, ಬಜೆಟ್‌ನಲ್ಲಿ ರೈತರ ಹಾಗೂ ಬಡವರ ಪರವಾಗಿ ಯೋಜನೆಗಳನ್ನು ರೂಪಿಸಲಾಗಿದೆ. ಬಜೆಟ್ ವಿರುದ್ಧ ಮಾತನಾಡುವ ಮುನ್ನ ಅದನ್ನು ಪೂರ್ತಿಯಾಗಿ ಓದಲೆಂಬ ಸಲಹೆ ನೀಡಿದರು.

ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ. ಸದಾನಂದಗೌಡ ಮಾತನಾಡಿ, ಉತ್ತರ ಕರ್ನಾಟಕಕ್ಕೆ ಹೊರತುಪಡಿಸಿದರೆ ಉಳಿದ ರಾಜ್ಯದ ಯಾವುದೇ ಪ್ರದೇಶಗಳಿಗೆ ಬಜೆಟ್ನಿಂದ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು. ಬಜೆಟ್ ಇತಿಹಾಸದಲ್ಲೇ ಇದು ಶ್ರೇಷ್ಠವಾಗಿದ್ದು ಎಂದು ಆಡಳಿತ ಪಕ್ಷಗಳು ಹೇಳುತ್ತಿವೆ, ಹಾಗಿದ್ದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಯಾಕೆ ಇಂತಹ ಬಜೆಟ್ ಹೊರತಂದಿಲ್ಲ. ಇದೊಂದು ಚುನಾವಣೆಗಾಗಿ ರೂಪಿಸಲಾದ ಬಜೆಟ್ ಎಂದು ಅವರು ಆರೋಪಿಸಿದರು.
ಮತ್ತಷ್ಟು
ಉಗ್ರರ ತನಿಖೆಯಲ್ಲಿ ಹಸ್ತಕ್ಷೇಪ ಬೇಡ: ಯಡಿಯೂರ್
ಬಜೆಟ್: ರಾಜ್ಯದಲ್ಲಿ ವಿಭಿನ್ನ ಪ್ರತಿಕ್ರಿಯೆ
ಗೋದ್ರ ಹಿಂಸಾಚಾರದಲ್ಲಿ ಉಗ್ರರ ಕೈವಾಡ!
ಎನ್‌ಡಿಎಯೊಂದಿಗೆ ಮರು ಮೈತ್ರಿಗೆ ಜೆಡಿಯು ಚಿಂತನೆ
ಭಯೋತ್ಪಾದನೆ ಹೆಸರಿನಲ್ಲಿ ಮುಗ್ದರಿಗೆ ಕಿರುಕುಳ-ಇಬ್ರಾಹಿಂ
ಕ್ಷುಲಕ್ಕ ಕಾರಣಕ್ಕಾಗಿ ಕಾಲ್ ಸೆಂಟರ್ ಉದ್ಯೋಗಿಯ ಕೊಲೆ