ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಜನತಾದರ್ಶನ ರಾಜಕೀಯ ದುರುದ್ದೇಶ ಅಲ್ಲ: ಠಾಕೂರ್
PTI
ಜನಸಾಮಾನ್ಯರ ಸಮಸ್ಯಾಪರಿಹಾರಕ್ಕಾಗಿ ನಡೆಸುವ ಜನತಾದರ್ಶನದಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಹೇಳಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಶನಿವಾರ ನಡೆಸಲಾದ ಜನತಾದರ್ಶನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಜನತಾದರ್ಶನದ ನಡೆಸುತ್ತಿರುವುದು ಯಾರನ್ನು ಮೆಚ್ಚಿಸುವುದಕ್ಕಲ್ಲ. ಅದರ ಅಗತ್ಯವೂ ತನಗಿಲ್ಲ. ಜನರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸುವುದು ಪ್ರತಿ ಸರ್ಕಾರದ ಜವಾಬ್ದಾರಿಯಾಗಿದೆ" ಎಂದು ತಿಳಿಸಿದರು.

ಜನತಾದರ್ಶನಕ್ಕೆ ಸಹಕಾರ ನೀಡುತ್ತಿರುವ ದಾನಿಗಳು ಎಲ್ಲಿಯವರೆಗೆ ಇರುತ್ತಾರೋ ಅಲ್ಲಿಯವರೆಗೆ ಜನತಾದರ್ಶನ ಮುಂದುವರಿಯಲಿದೆ ಎಂದ ರಾಜ್ಯಪಾಲರು, ಆ ಮೂಲಕ ಬಡಜನರಿಗೆ ನೇರ ಸೇವೆ ಒದಗಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ನೀಡುವುದೇ ತಮ್ಮ ಆದ್ಯ ಕರ್ತವ್ಯ ಎಂದು ತಿಳಿಸಿದರು.

ಈ ಹಿಂದೆ ಹಲವು ರಾಜಕೀಯ ಪಕ್ಷಗಳು ಜನತಾದರ್ಶನ ಒಂದು ರಾಜಕೀಯ ಉದ್ದೇಶವಾಗಿದ್ದು, ಚುನಾವಣೆಯನ್ನು ಗಮನದಲ್ಲಿರಿಸಿ ಇದನ್ನು ನಡೆಸಲಾಗುತ್ತಿದೆ ಎಂದು ರಾಜ್ಯಪಾಲರ ವಿರುದ್ಧ ಆರೋಪಿಸಿದ್ದವು.
ಮತ್ತಷ್ಟು
ಮೀಟಾ ಭಯೋತ್ಪಾದಕ ಸಂಘಟನೆಯಲ್ಲ: ಸ್ಪಷ್ಟನೆ
ಗೌಡರ ಪ್ರತಿಕ್ರಿಯೆಗೆ ವಿಶ್ವನಾಥ್ ಕಿಡಿ
ಉಗ್ರರ ತನಿಖೆಯಲ್ಲಿ ಹಸ್ತಕ್ಷೇಪ ಬೇಡ: ಯಡಿಯೂರ್
ಬಜೆಟ್: ರಾಜ್ಯದಲ್ಲಿ ವಿಭಿನ್ನ ಪ್ರತಿಕ್ರಿಯೆ
ಗೋದ್ರ ಹಿಂಸಾಚಾರದಲ್ಲಿ ಉಗ್ರರ ಕೈವಾಡ!
ಎನ್‌ಡಿಎಯೊಂದಿಗೆ ಮರು ಮೈತ್ರಿಗೆ ಜೆಡಿಯು ಚಿಂತನೆ