ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮತದಾರ ಪಟ್ಟಿಯ ತರಾತುರಿಯ ಪರಿಷ್ಕರಣೆ: ಪೂಜಾರಿ
"ಶೀಘ್ರ ಚುನಾವಣೆಗಾಗಿ ಆಯೋಗ ತರಾತುರಿಯಲ್ಲಿ ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದೆ. ಇದರಿಂದ ಅನೇಕ ಜನರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದ್ದು, ಇದೊಂದು ಅಕ್ಷಮ್ಯ ಅಪರಾಧವಾಗಿದೆ. ಈ ಕುರಿತು ಆಯೋಗ ಗಂಭೀರ ಚಿಂತನೆ ನಡೆಸಬೇಕಾದ ಅಗತ್ಯವಿದೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ಜನಾರ್ಧನ ಪೂಜಾರಿ ಹೇಳಿದ್ದಾರೆ.

ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು 50ಲಕ್ಷಕ್ಕೂ ಮೀರಿ ನಕಲಿ ಮತದಾರರ ಹೆಸರು ಪಟ್ಟಿಯಲ್ಲಿದ್ದರೆ, 20ಲಕ್ಷಕ್ಕೂ ಹೆಚ್ಚಿನ ಅರ್ಹ ಮತದಾರರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮತದಾರರ ಪಟ್ಟಿಯಲ್ಲಿನ ದೋಷಗಳನ್ನು ಸರಿಪಡಿಸಬೇಕು. ಆ ಬಳಿಕವಷ್ಟೇ ಚುನಾವಣೆ ನಡೆಸಬೇಕೆಂದು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ವಿತ್ತ ಸಚಿವರು ಮಂಡಿಸಿರುವ ಜನಪರ ಬಜೆಟ್‌ನಿಂದಾಗಿ ರಾಜ್ಯದಲ್ಲಿ ಮುಂದಿನ ವಾರದಲ್ಲಿ ಚುನಾವಣೆ ನಡೆದರೂ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯುವ ವಿಶ್ವಾಸ ತಮಗಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ಜನತಾದರ್ಶನ ರಾಜಕೀಯ ದುರುದ್ದೇಶ ಅಲ್ಲ: ಠಾಕೂರ್
ಮೀಟಾ ಭಯೋತ್ಪಾದಕ ಸಂಘಟನೆಯಲ್ಲ: ಸ್ಪಷ್ಟನೆ
ಗೌಡರ ಪ್ರತಿಕ್ರಿಯೆಗೆ ವಿಶ್ವನಾಥ್ ಕಿಡಿ
ಉಗ್ರರ ತನಿಖೆಯಲ್ಲಿ ಹಸ್ತಕ್ಷೇಪ ಬೇಡ: ಯಡಿಯೂರ್
ಬಜೆಟ್: ರಾಜ್ಯದಲ್ಲಿ ವಿಭಿನ್ನ ಪ್ರತಿಕ್ರಿಯೆ
ಗೋದ್ರ ಹಿಂಸಾಚಾರದಲ್ಲಿ ಉಗ್ರರ ಕೈವಾಡ!