ರಾಜಕಾರಣಿಗಳು ಕನ್ನಡ ನಾಡು ನುಡಿಯ ಬಗ್ಗೆ ಕಾಳಜಿ ವಹಿಸದೆ ಇರುವುದರಿಂದಲೇ ಕನ್ನಡಕ್ಕೆ ಇಂದು ಈ ದುರ್ಗತಿ ಬಂದಿದೆ ಎಂದು ಖ್ಯಾತಿ ಸಾಹಿತಿ ದೇ.ಜವರೇಗೌಡ ಆರೋಪಿಸಿದ್ದಾರೆ.
ಶನಿವಾರ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಕನ್ನಡ ಸಾಹಿತ್ಯ ಪರಿಷತ್ ಸ್ಥಾಪಿಸಿರುವ 'ನೃಪತುಂಗ ಪ್ರಶಸ್ತಿ'ಯನ್ನು ಕೇಂದ್ರ ಸಚಿವ ಎಂ.ವಿ. ರಾಜಶೇಖರ್ ಅವರಿಂದ ಸ್ವೀಕರಿಸಿದ ಬಳಿಕ ಅವರು ಮಾತನಾಡುತ್ತಿದ್ದರು. ದೇಜಗೌ ಈ ಪ್ರಶಸ್ತಿ ಪಡೆಯುತ್ತಿರುವ ಮೊದಲಿಗರಾಗಿದ್ದಾರೆ.
"ಕನ್ನಡ ನಾಡು ನುಡಿಯ ಬಗ್ಗೆ ಆಸಕ್ತಿ ವಹಿಸದಿರುವ ರಾಜಕಾರಣಿಗಳು ಶಿಖಂಡಿಗಳೆಂದು ಈ ಹಿಂದೆಯೇ ಕುವೆಂಪು ಹೇಳಿದ್ದರು. ಇದನ್ನೇ ತಾನು ಕೂಡ ಹೇಳಲು ಬಯಸುತ್ತೇನೆ" ಎಂದು ನುಡಿದ ಅವರು, ಸ್ಥಳೀಯ ಭಾಷೆ ಮಾಧ್ಯಮವಾದಾಗ ಮಾತ್ರ ರಾಜ್ಯದ ಅಭಿವೃದ್ದಿ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಎಂ.ವಿ. ರಾಜಶೇಖರನ್, ಕನ್ನಡಕ್ಕೆ ಸೂಕ್ತ ಶಾಸ್ತ್ರೀಯ ಸ್ಥಾನಮಾನ ದೊರಕಿಸಿ ಕೊಡುವ ಬಗ್ಗೆ ಶೀಘ್ರದಲ್ಲಿಯೇ ಪ್ರಧಾನಿ ಬಳಿಗೆ ನಿಯೋಗವೊಂದನ್ನು ಕರೆದೊಯ್ಯುವುದಾಗಿ ತಿಳಿಸಿದರು.
|