ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ದಾಳಿಯ ಸಂಚಿನಲ್ಲಿ ಐಟಿ ಕಂಪನಿಗಳು
ಇನ್ಫೋಸಿಸ್, ಡೆಲ್, ಐಬಿಎಂ ಸೇರಿದಂತೆ ಬಹುತೇಕ ಐಟಿ ಕಂಪೆನಿಗಳನ್ನು ಗುರಿಯಾಗಿಟ್ಟುಕೊಂಡು ವಿಧ್ವಂಸಕ ಕೃತ್ಯಗಳನ್ನು ನಡೆಸಲು ಉಗ್ರರು ತೀರ್ಮಾನಿಸಿದ್ದರು ಎಂಬ ಮಾಹಿತಿ ಬಂಧಿತ ಉಗ್ರರಿಂದ ಬಹಿರಂಗಗೊಂಡಿದೆ. ಈ ಮೂಲಕ ಪ್ರಕರಣವು ಮತ್ತೊಂದು ಹೊಸ ತಿರುವನ್ನು ಪಡೆದುಕೊಂಡಿದೆ.

ದಾವಣಗೆರೆಯಲ್ಲಿ ಬಂಧಿಸಲಾಗಿರುವ ಶಂಕಿತ ಉಗ್ರರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭದಲ್ಲಿ ಪೊಲೀಸರು ಹುಬ್ಬಳ್ಳಿ ನ್ಯಾಯಾಲಯಕ್ಕೆ ಈ ಕುರಿತು ವರದಿ ಸಲ್ಲಿಸಿದ್ದು, ಈ ಹಿನ್ನೆಲೆಯಲ್ಲಿ ಆಸಿಫ್ ಸಲ್ಲಿಸಿರುವ ಜಾಮೀನು ಅರ್ಜಿಯನ್ನು ತಿರಸ್ಕರಿಸಬೇಕೆಂದು ಸಿಓಡಿ ಪೊಲೀಸರು ನ್ಯಾಯಾಲಯದಲ್ಲಿ ಮನವಿ ಸಲ್ಲಿಸಿದ್ದಾರೆ.

ಶಂಕಿತ ಉಗ್ರರಿಂದ ಈಗಾಗಲೇ 100ಜೆಲೆಟಿನ್ ಕಡ್ಡಿಗಳು, 100ಡಿಟೊನೇಟರ್ ಹಾಗೂ ಹಾಗೂ ಕೈಬಾಂಬ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಲ್ಲದೆ, ಆಸಿಫ್ ವಿಚಾರಣೆಯಲ್ಲಿ ಸಿಮಿ ಸಂಘಟನೆಯ ಜಾಲದ ಕುರಿತು ಅನೇಕ ಮಾಹಿತಿಗಳನ್ನು ನೀಡಿದ್ದಾನೆ. ಈ ಬಗ್ಗೆ ಪೊಲೀಸರು ನೀಡಿರುವ ಮನವಿಯನ್ನು ಪರೀಶೀಲಿಸಿದ ನ್ಯಾಯಾಲಯ ಮಾರ್ಚ್ 14ರ ವರೆಗೆ ನ್ಯಾಯಾಂಗ ವಿಸ್ತರಣೆಗೆ ಆದೇಶ ನೀಡಿದೆ.

ಈ ಮಧ್ಯೆ ಬಂಧಿತ ಉಗ್ರರಿಂದ ವಶಪಡಿಸಿಕೊಳ್ಳಲಾಗಿರುವ ಜಿಹಾದಿ ಪುಸ್ತಕಗಳಲ್ಲಿ ಕರ್ನಾಟಕ, ಜಮ್ಮುಕಾಶ್ಮೀರ, ಇರಾಕ್ ಸೇರಿದಂತೆ ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಮುಸ್ಲಿಮರಿಗೆ ಹಿಂಸೆ ನೀಡಲಾಗುತ್ತದೆ ಎಂದು ಉಗ್ರರು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಮತ್ತಷ್ಟು
ರಾಜ್ಯ ಸರಕಾರದಿಂದ ಕಬ್ಬಿಗೆ 160 ರೂ ಬೆಂಬಲ ಬೆಲೆ
ಕನ್ನಡದ ದುರ್ಗತಿಗೆ ರಾಜಕಾರಣಿಗಳು ಕಾರಣ: ದೇಜಗೌ
ಮತದಾರ ಪಟ್ಟಿಯ ತರಾತುರಿಯ ಪರಿಷ್ಕರಣೆ: ಪೂಜಾರಿ
ಜನತಾದರ್ಶನ ರಾಜಕೀಯ ದುರುದ್ದೇಶ ಅಲ್ಲ: ಠಾಕೂರ್
ಮೀಟಾ ಭಯೋತ್ಪಾದಕ ಸಂಘಟನೆಯಲ್ಲ: ಸ್ಪಷ್ಟನೆ
ಗೌಡರ ಪ್ರತಿಕ್ರಿಯೆಗೆ ವಿಶ್ವನಾಥ್ ಕಿಡಿ