ಕೃಷ್ಣರವರನ್ನು ಅಮೇರಿಕ ರಾಯಭಾರಿಯಾಗಿ ಕಳುಹಿಸುವುದು ಸೂಕ್ತ ಎಂದು ಕೆಲವರು ಸೂಚಿಸಿದ್ದಾರೆ. ಈ ಕುರಿತು ಮಾತನಾಡಿದ ಕೃಷ್ಣ ಅಮೇರಿಕ ನೀರು ಕುಡಿದು ಸಾಕಾಗಿದೆ. ಕಾವೇರಿ ನೀರಿಗಾಗಿ ಮನ ಹಾತೊರೆಯುತ್ತಿದೆ ಎಂದು ಹೇಳಿಕೆ ನೀಡುವ ಮೂಲಕ ರಾಜಕಾರಣಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದಾರೆ.
ರಾಜ್ಯ ರಾಜಕೀಯದಲ್ಲಿ ಕೃಷ್ಣ ಆಗಮನದ ವಿಚಾರದಲ್ಲಿನ ಚರ್ಚೆ ಬಹುಶಃ ರಾಷ್ಟ್ರಪತಿ ಆಡಳಿತ ಜಾರಿಯಾಗುವುದಕ್ಕೂ ಮುನ್ನವೇ ಪ್ರಾರಂಭಗೊಂಡಿದ್ದರೂ, ಇನ್ನೂ ಅಂತ್ಯಕಂಡಿಲ್ಲ. ಆದರೆ ಕೃಷ್ಣ ಹೈಕಮಾಂಡ್ ನಿರ್ಧಾರಕ್ಕಾಗಿ ಎದುರು ನೋಡುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣ, ನಾನು ಸಕ್ರಿಯವಾಗಿ ರಾಜಕಾರಣಕ್ಕೆ ಮರಳುವ ವಿಚಾರ ವರಿಷ್ಠರ ಆಯ್ಕೆ ಬಿಟ್ಟಿದ್ದಾದದರೂ, ನನ್ನ ಅನಿಸಿಕೆಯೂ ಬಹಳ ಅಗತ್ಯ. ಈ ಬಗ್ಗೆ ರಾಜ್ಯದಲ್ಲಿ ನಡೆಯುತ್ತಿರುವ ಚರ್ಚೆಗಳ ಕುರಿತು ಹೇಳಲು ಇಚ್ಛಿಸುವುದಿಲ್ಲ. ಎಲ್ಲವೂ ಭಸ್ಯ ಶೀಘ್ರಂ ಎಂದು ಅಡ್ಡ ಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದರು.
|