ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಜರ್ ನೋಡಲು ಮುಗಿಬಿದ್ದ ಜನತೆ
ND
ಕ್ರಿಕೆಟ್ ಟೂರ್ನಿಯೊಂದರ ಉದ್ಘಾಟನೆಗೆ ಆಗಮಿಸಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹಮದ್ ಅಜರುದ್ದೀನ್ ಅವರನ್ನು ನೋಡಲು ಜನತೆ ಸೇರಿದಾಗ ನೂಕುನುಗ್ಗಲು ಉಂಟಾಗಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿಪ್ರಹಾರ ನಡೆಸಿದ ಘಟನೆ ಜೇವರ್ಗಿಯಲ್ಲಿ ಭಾನುವಾರ ಸಂಭವಿಸಿದೆ.

ಧರ್ಮಸಿಂಗ್ ಫೌಂಡೇಶನ್ ಕಪ್ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನೆ ಸಂದರ್ಭದಲ್ಲಿ ಕ್ರಿಕೆಟ್ ತಾರೆಯನ್ನು ನೋಡಲು ನೂಕುನುಗ್ಗಲು ಉಂಟಾಯಿತು. ಇದೇ ಸಂದರ್ಭದಲ್ಲಿ ಗ್ಯಾಸ್ ತುಂಬಿದ ಬಲೂನುಗಳನ್ನು ಆಕಾಶಕ್ಕೆ ಬಿಡುತ್ತಿದ್ದಂತೆಯೇ ಅದನ್ನು ಕೆಲ ಯುವಕರು ಹಿಡಿದುಕೊಂಡಿದಾಗ ಅವು ಸ್ಫೋಟಗೊಂಡು ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಇಬ್ಬರಿಗೆ ಗಾಯಗಳಾದವು.

ಇದರಿಂದ ಸ್ಥಳದಲ್ಲಿ ಗೊಂದಲಮಯ ವಾತಾವರಣ ಕಂಡುಬಂದು, ಜನರ ನಡುವೆ ನೂಕುನುಗ್ಗಲು ಪ್ರಾರಂಭಗೊಂಡಿತು. ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದಾರಾದರೂ, ಒಂದು ಹಂತದಲ್ಲಿ ಭಾರಿ ಸಂಖ್ಯೆಯಲ್ಲಿ ಜನರು ಮುಗಿ ಬಿದ್ದುದರಿಂದ ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಕೈಚೆಲ್ಲಿ ಕುಳಿತುಕೊಳ್ಳಬೇಕಾಯಿತು. ಬೆಂಕಿಯಿಂದ ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಇವೆಲ್ಲವುದರ ಮಧ್ಯೆಯೇ ಕ್ರಿಕೆಟ್ ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಹೇಗೋ ಮುಗಿಸಿದರು. ಆದರೆ ಕ್ರಿಕೆಟ್ ಆಡುವ ಮೂಲಕ ಪಂದ್ಯಕ್ಕೆ ಚಾಲನೆ ನೀಡಲು ಅಜರುದ್ದೀನ್ ಮೈದಾನಕ್ಕಿಳಿಯುತ್ತಿದ್ದಂತೆ ಯುವಕರು ಪೊಲೀಸರನ್ನು ಲೆಕ್ಕಿಸದೆ ಕ್ರಿಕೆಟ್ ತಾರೆ ಮೇಲೆ ಮುಗಿಬಿದ್ದರು. ಕಾರ್ಯಕ್ರಮ ಮುಗಿಸಿದ ಅಜರ್ ಕ್ರೀಡಾಂಗಣದಿಂದ ಹೊರಬರಲು ಹರಸಾಹಸ ಮಾಡಬೇಕಾಯಿತು. ಅವರು ನಿರ್ಗಮಿಸಿದಾಗ ಇತ್ತ ಜನಜಂಗುಳಿ ಕರಗಿ ಎಲ್ಲವೂ ಸಹಜ ಸ್ಥಿತಿಗೆ ಮರಳಿತಾದರೂ, ಈ ಘಟನೆ ಸಂಘಟಕರಲ್ಲಿ ಮುಜುಗರ ತಂದಿತ್ತು.
ಮತ್ತಷ್ಟು
ಇಂದು ಚುನಾವಣಾ ದಿನಾಂಕ ಪ್ರಕಟಣೆ?
ಗ್ರಾಮಾಭಿವೃದ್ದಿ ಯೋಜನೆ ದೇಶಕ್ಕೆ ಮಾದರಿ: ಠಾಕೂರ್ ಶ್ಲಾಘನೆ
ರಾಜಕೀಯದತ್ತ ಮೂಡುತ್ತಿರುವ ಕೃಷ್ಣರ ಚಿತ್ತ
ಉಗ್ರರ ದಾಳಿಯ ಸಂಚಿನಲ್ಲಿ ಐಟಿ ಕಂಪನಿಗಳು
ರಾಜ್ಯ ಸರಕಾರದಿಂದ ಕಬ್ಬಿಗೆ 160 ರೂ ಬೆಂಬಲ ಬೆಲೆ
ಕನ್ನಡದ ದುರ್ಗತಿಗೆ ರಾಜಕಾರಣಿಗಳು ಕಾರಣ: ದೇಜಗೌ