ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಧೋನಿ-ಮೈಸೂರು ಸ್ಯಾಂಡಲ್ ಒಪ್ಪಂದ ರದ್ದು
PTI
ಭಾರತ ಕ್ರಿಕಿಟ್ ತಂಡದ ನಾಯಕನಾಗಿರುವ ಮಹೇಂದ್ರ ಸಿಂಗ್ ಧೊನಿ ಜೊತೆಗೆ ಮೈಸೂರು ಸ್ಯಾಂಡಲ್ ಸೋಪ್ ಕಂಪೆನಿ ಮಾಡಿಕೊಂಡಿದ್ದ ಒಪ್ಪಂದವನ್ನು ರದ್ದು ಪಡಿಸಲಾಗಿದೆ ಎಂದು ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಅನಿಲ್ ಕುಮಾರ್ ಹೇಳಿದ್ದಾರೆ.

ಒಪ್ಪಂದದಂತೆ ಮಹೇಂದ್ರ ಸಿಂಗ್ ಧೋನಿ 10 ದಿನಗಳ ಜಾಹೀರಾತು ಚಿತ್ರೀಕರಣದಲ್ಲಿ ಭಾಗವಹಿಸಬೇಕಿತ್ತು. ಆದರೆ ಕೇವಲ ಮೂರು ದಿನ ಮಾತ್ರ ಭಾಗವಹಿಸಿರುವುದರಿಂದ ಒಪ್ಪಂದವನ್ನು ರದ್ದು ಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಕಂಪೆನಿ ಜೊತೆ ಒಪ್ಪಂದವನ್ನು ಮುರಿದಿರುವ ಧೋನಿ, ಕಂಪೆನಿಗೆ 41 ಲಕ್ಷರೂ. ನಷ್ಟದ ಪರಿಹಾರ ನೀಡಬೇಕೆಂದು ಕೇಳಲಾಗುವುದು. ಇಲ್ಲವಾದರೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳುವುದಾಗಿ ಕಂಪೆನಿ ತಿಳಿಸಿದೆ.

ಈ ಮಧ್ಯೆ ಧೋನಿ, ಮೈಸೂರ್ ಸ್ಯಾಂಡಲ್ ಕಂಪೆನಿ ಜೊತೆ ಮಾಡಿಕೊಂಡಿರುವ ಒಪ್ಪಂದವನ್ನು ಪಾಲಿಸದೆ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಈ ಹಿಂದೆಯೇ ಕರ್ನಾಟಕ ರಕ್ಷಣಾ ಕಾರ್ಯಕರ್ತರು ಆರೋಪಿಸಿದ್ದು, ಕರ್ನಾಟಕಕ್ಕೆ ಕಾಲಿಟ್ಟರೆ ಕಪ್ಪು ಬಾವುಟ ಹಾರಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿರುವುದನ್ನು ಸ್ಮರಿಸಿಕೊಳ್ಳಬಹುದು.
ಮತ್ತಷ್ಟು
ಮತಾಂತರ : ಸಹಜಸ್ಥಿತಿಗೆ ಬೈಂದೂರು
ಅಜರ್ ನೋಡಲು ಮುಗಿಬಿದ್ದ ಜನತೆ
ಇಂದು ಚುನಾವಣಾ ದಿನಾಂಕ ಪ್ರಕಟಣೆ?
ಗ್ರಾಮಾಭಿವೃದ್ದಿ ಯೋಜನೆ ದೇಶಕ್ಕೆ ಮಾದರಿ: ಠಾಕೂರ್ ಶ್ಲಾಘನೆ
ರಾಜಕೀಯದತ್ತ ಮೂಡುತ್ತಿರುವ ಕೃಷ್ಣರ ಚಿತ್ತ
ಉಗ್ರರ ದಾಳಿಯ ಸಂಚಿನಲ್ಲಿ ಐಟಿ ಕಂಪನಿಗಳು