ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಜ್ಯಕ್ಕೆ ಪೃಥ್ವಿರಾಜ್ ಚೌಹಾಣ್ ಭೇಟಿ
ರಾಜ್ಯದಲ್ಲಿನ ಚುನಾವಣಾ ತಯಾರಿ ವೀಕ್ಷಣೆಗೆ ಚುನಾವಣಾ ಆಯೋಗವು ನಗರಕ್ಕೆ ಆಗಮಿಸಿರುವ ಬೆನ್ನಿಗೆ, ರಾಜ್ಯದ ಕಾಂಗ್ರೆಸ್ ಉಸ್ತುವಾರಿ ವಹಿಸಿಕೊಂಡಿರುವ ಕೇಂದ್ರದ ಪೃಥ್ವಿರಾಜ್ ಚೌಹಾಣ್ ಸೋಮವಾರ ನಗರಕ್ಕೆ ಆಗಮಿಸಿದ್ದಾರೆ.

ನಗರಕ್ಕೆ ಆಗಮಿಸಿರುವ ಚೌಹಾಣ್ ಕಾಂಗ್ರೆಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದು, ಚುನಾವಣೆ ಸಿದ್ಧತೆಗೆ ಸಂಬಂಧಿಸಿದಂತೆ ಕೆಲವು ಮಹತ್ವಪೂರ್ಣ ನಿರ್ಣಯಗಳನ್ನು ಕೈಗೊಳ್ಳುವ ಬಗ್ಗೆ ರಾಜ್ಯ ನಾಯಕರಲ್ಲಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್, ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರೊಂದಿಗೆ ಚೌಹಾಣ್ ಸಭೆಯನ್ನು ಏರ್ಪಡಿಸಿದ್ದರು.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೃಥ್ವಿರಾಜ್ ಚೌಹಾಣ್, ಕ್ಷೇತ್ರ ಪುನರ್ ವಿಂಗಡಣಾ ಅನ್ವಯದಂತೆ ಚುನಾವಣೆ ನಡೆಯಲಿರುವುದರಿಂದ ಅದಕ್ಕೆ ಪೂರಕವಾಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆಸಲಾಗಿದೆ ಎಂದು ಹೇಳಿದರು.

ಯಾವುದೇ ಸಂದರ್ಭದಲ್ಲಿಯೂ ರಾಜ್ಯದಲ್ಲಿ ಚುನಾವಣೆ ನಡೆಸಿದರೂ, ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ ಎಂದ ಅವರು, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಕಾಂಗ್ರೆಸ್ ಮೇಲೆ ಅಪವಾದ ಮಾಡಿರುವುದನ್ನು ಚೌಹಾಣ್ ತೀವ್ರವಾಗಿ ಖಂಡಿಸಿದರು.
ಮತ್ತಷ್ಟು
ಬೆಂಗಳೂರಲ್ಲಿ ಮತ್ತೊಬ್ಬ ಉಗ್ರ ಸೆರೆಗೆ
ಧೋನಿ-ಮೈಸೂರು ಸ್ಯಾಂಡಲ್ ಒಪ್ಪಂದ ರದ್ದು
ಮತಾಂತರ : ಸಹಜಸ್ಥಿತಿಗೆ ಬೈಂದೂರು
ಅಜರ್ ನೋಡಲು ಮುಗಿಬಿದ್ದ ಜನತೆ
ಇಂದು ಚುನಾವಣಾ ದಿನಾಂಕ ಪ್ರಕಟಣೆ?
ಗ್ರಾಮಾಭಿವೃದ್ದಿ ಯೋಜನೆ ದೇಶಕ್ಕೆ ಮಾದರಿ: ಠಾಕೂರ್ ಶ್ಲಾಘನೆ