ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣರಿಂದ ರಾಜ್ಯಪಾಲರ ಭೇಟಿ
ಯುಗಾದಿಗೆ ಮುನ್ನವೇ ರಾಜಕೀಯ ಪ್ರವೇಶ?
PIB
ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ. ಕೃಷ್ಣ ಅವರು ಯುಗಾದಿಯ ವೇಳೆ ರಾಜ್ಯ ರಾಜಕಾರಣಕ್ಕೆ ಮರಳುವ ಸೂಚನೆ ನೀಡಿರುವ ಬೆನ್ನಿಗೆ, ಸೋಮವಾರ ರಾತ್ರಿ ರಾಜ್ಯಪಾಲ ರಾಮೇಶ್ವರ್ ಠಾಕೂರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ನಿನ್ನೆ ರಾತ್ರಿ 7.30ರ ಹೊತ್ತಿಗೆ ರಾಜಭವನಕ್ಕೆ ತೆರಳಿದ ಕೃಷ್ಣ, ಸುಮಾರು ಒಂದೂವರೆ ಗಂಟೆಗಳ ಕಾಲ ರಾಜ್ಯಪಾಲರೊಂದಿಗೆ ಮಾತುಕತೆ ನಡೆಸಿದರಾದರೂ ಮಾತುಕತೆಯ ವಿವರ ಇನ್ನು ತಿಳಿದು ಬಂದಿಲ್ಲ. ಆದರೆ ಇತ್ತ ಚುನಾವಣಾ ಆಯೋಗ ರಾಜ್ಯಕ್ಕೆ ಆಗಮಿಸಿದ್ದು, ಶೀಘ್ರ ಚುನಾವಣೆಗೆ ತಯಾರಿ ನಡೆಸುತ್ತಿದೆ ಎಂಬ ಬೆನ್ನಲ್ಲೆ ಈ ಕೃಷ್ಣ ಭೇಟಿಗೆ ಮಹತ್ವ ಬಂದಿದೆ.

ಇತ್ತೀಚೆಗಷ್ಟೇ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಎಸ್.ಎಂ.ಕೃಷ್ಣ ಯುಗಾದಿ ಬಳಿಕ ರಾಜಕೀಯದ ಬಗ್ಗೆ ಅಂತಿಮ ನಿರ್ಧಾರ ಎಂದು ಹೇಳಿದ್ದರು. ಅದರೆ ಈಗ ದಿಢೀರ್ ಆಗಿ ರಾಜಭವನಕ್ಕೆ ಆಗಮಿಸಿ, ಮಾತುಕತೆ ನಡೆಸಿದ್ದು ಹಲವು ಹುಬ್ಬುಗಳು ಮೇಲೇರುವಂತೆ ಮಾಡಿದ್ದಾರೆ.

ಈ ಮಧ್ಯೆ, ಭೇಟಿ ಕುರಿತು ತಮಗಾವುದೇ ಮಾಹಿತಿ ಇಲ್ಲ. ಇವರಿಬ್ಬರ ಮಾತುಕತೆ ಪಕ್ಷಕ್ಕೆ ಸಂಬಂಧಿಸಿದ್ದಲ್ಲ ಎಂದು ಕೆಪಿಸಿಸಿ ಹೇಳಿಕೆ ನೀಡಿದ್ದರೂ, ನಿಜವಾದ ರಹಸ್ಯ ಇನ್ನೂ ಬಯಲಾಗಬೇಕಿದೆ.
ಮತ್ತಷ್ಟು
ತ್ವರಿತ ಚುನಾವಣೆಗೆ ಆಯೋಗ ಒಲವು; ಇಂದು ಸಭೆ
ಸಾಸ್ಕಿನ್ ಉದ್ಯೋಗಿಯ ಕನ್ನಡ ವಿರೋಧಿ ಕವನಕ್ಕೆ ಪ್ರತಿಭಟನೆ
ರಾಜ್ಯಕ್ಕೆ ಪೃಥ್ವಿರಾಜ್ ಚೌಹಾಣ್ ಭೇಟಿ
ಬೆಂಗಳೂರಲ್ಲಿ ಮತ್ತೊಬ್ಬ ಉಗ್ರ ಸೆರೆಗೆ
ಧೋನಿ-ಮೈಸೂರು ಸ್ಯಾಂಡಲ್ ಒಪ್ಪಂದ ರದ್ದು
ಮತಾಂತರ : ಸಹಜಸ್ಥಿತಿಗೆ ಬೈಂದೂರು