ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬೆಳಗಾವಿ: ಕನ್ನಡಿಗನಿಗೆ ಮೇಯರ್ ಪಟ್ಟ
ಬೆಳಗಾವಿ ಪಾಲಿಕೆಯ ಮೇಯರ್ ಸ್ಥಾನದ ಆಯ್ಕಾ ಪ್ರಕ್ರಿಯೆ ಪೂರ್ಣಗೊಂಡಿದ್ದು, ಪ್ರಥಮ ಬಾರಿಗೆ ಮೇರ್ ಸ್ಥಾನ ಕನ್ನಡಿಗನ ಪಾಲಾಗಿದೆ. ಕನ್ನಡಿಗ ಪ್ರಶಾಂತ್ ಬುಡವಿ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ಪ್ರಶಾಂತ್ ಪರವಾಗಿ 30 ಸದಸ್ಯರು ಹಾಗೂ ಸಂಸದರೊಬ್ಬರು ಮತ ಚಲಾಯಿಸಿದರು.

ಬೆಳಗಾವಿ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಕನ್ನಡಿಗರು ಮೇಯರ್ ಆಗಿ ಆಯ್ಕೆಗೊಂಡಿದ್ದು, ಕನ್ನಡ ಪರ ಸಂಘಟನೆಗಳ ಸಂಸತಕ್ಕೆ ಕಾರಣವಾಗಿತ್ತು. ಮೇಯರ್ ಚುನಾವಣೆ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ಕನ್ನಡ ಪರ ಸಂಘಟನೆಗಳು ಹಾಗೂ ಸ್ಥಳೀಯರು ಅದ್ದೂರಿಯಾಗಿ ವಿಜಯೋತ್ಸವವನ್ನು ಆಚರಿಸಿಕೊಂಡರು.

ಬೆಳಗಾವಿ ಹಾಗೂ ಬೀದರ್‌ ಅನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬುದು ಮರಾಠಿಗಳ ಆಗ್ರಹವಾಗಿತ್ತು. ಈ ಬಗ್ಗೆ ವಿವಾದಕ್ಕೀಡಾಗಿದ್ದ ಬೆಳಗಾವಿಯಲ್ಲಿ ಸ್ವಾಭಾವಿಕವಾಗಿಯೇ ಮೇಯರ್ ಚುನಾವಣೆ ಕುತೂಹಲ ಮೂಡಿಸಿತ್ತು. ಮೇಯರ್ ಚುನಾವಣೆಗೆ ಮೊದಲು ಎಂಇಎಸ್‌ನ 29 ಸದಸ್ಯರು ಮರಾಠಿಯಲ್ಲಿ ಪ್ರಮಾಣವಚನ ನಡೆಸಿದ್ದರು. ಚುನಾವಣೆ ಸಂದರ್ಭದಲ್ಲಿ ಸುತ್ತಮುತ್ತಲಿನ ಪ್ರದೇಶದಲ್ಲಿ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.
ಮತ್ತಷ್ಟು
ರಾಜ್ಯದಲ್ಲಿ ಮೇಯಲ್ಲೇ ಚುನಾವಣೆ
ಕೃಷ್ಣರಿಂದ ರಾಜ್ಯಪಾಲರ ಭೇಟಿ
ತ್ವರಿತ ಚುನಾವಣೆಗೆ ಆಯೋಗ ಒಲವು; ಇಂದು ಸಭೆ
ಸಾಸ್ಕಿನ್ ಉದ್ಯೋಗಿಯ ಕನ್ನಡ ವಿರೋಧಿ ಕವನಕ್ಕೆ ಪ್ರತಿಭಟನೆ
ರಾಜ್ಯಕ್ಕೆ ಪೃಥ್ವಿರಾಜ್ ಚೌಹಾಣ್ ಭೇಟಿ
ಬೆಂಗಳೂರಲ್ಲಿ ಮತ್ತೊಬ್ಬ ಉಗ್ರ ಸೆರೆಗೆ