ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವ್ಯಕ್ತಿಯ ಕೊಂದು ನಗ-ನಗದು ದೋಚಿದ ದರೋಡೆಕೋರರು
ಬಾಗೇಪಲ್ಲಿ ಸಮೀಪದ ತೋಟದ ಮನೆಗೆ ನುಗ್ಗಿದ ಡಕಾಯಿತರ ತಂಡ ವ್ಯಕ್ತಿಯೋರ್ವನನ್ನು ಕೊಂದು ಇತರರಿಗೆ ಮಾರಣಾಂತಿಕ ಹಲ್ಲೆ ನಡೆಸಿ ನಗನಾಣ್ಯ ದೋಚಿ ಪರಾರಿಯಾಗಿದೆ.

ಇಲ್ಲಿನ ಮಿಟ್ಟೇಮರಿ ಹೋಬಳೀ ಸಮೀಪದಲ್ಲಿರುವ ರಾಮರೆಡ್ಡಿ ಎಂಬುವರ ಮನೆಗೆ ನುಗ್ಗಿದ ಡಕಾಯಿತರು ರಾಮಸ್ವಾಮಿ ಎಂಬುವವರ ಮೇಲೆ ಮಾರಕಾಸ್ತ್ರಗಳಿಂದ ತೀವ್ರ ಹಲ್ಲೆ ನಡೆಸಿ ಕೊಲೆಗೈದಿದ್ದಾರೆ. ಮನೆಯಲ್ಲಿದ್ದ ಸುನಿಲ್, ಮುದ್ದಮ್ಮ ಹಾಗೂ ರಾಧಮ್ಮ ಮೇಲೆ ಹಲ್ಲೆ ನಡೆಸಿ, ಸುಮಾರು 2 ಲಕ್ಷರೂ. ಮೌಲ್ಯದ ಚಿನ್ನಾಭರಣ ಹಾಗೂ 30 ಸಾವಿರ ರೂ. ನಗದು ದೋಚಿ ಪರಾರಿಯಾಗಿದ್ದಾರೆ. ಹಲ್ಲೆ ವೇಳೆ ತೀವ್ರವಾಗಿ ಗಾಯಗೊಂಡವರನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರಗೆ ದಾಖಲಿಸಲಾಗಿದೆ.

ಸುಮಾರು 8 ಜನ ಡಕಾಯಿತರು ನಿನ್ನೆ ಮಧ್ಯರಾತ್ರಿ ಏಕಕಾಲಕ್ಕೆ ತೋಟದ ಮನೆಗೆ ನುಗ್ಗಿದಾಗ ರಾಮಸ್ವಾಮಿ ಎಂಬುವವರು ತೀವ್ರ ಪ್ರತಿರೋಧ ನೀಡಿದರು. ಆ ಸಮಯದಲ್ಲಿ ಡಕಾಯಿತರು ಲಾಂಗು ಮತ್ತು ಚೂರಿಗಳಿಂದ ಇರಿದು ಅವರನ್ನು ಕೊಲೆ ಮಾಡಿದರಲ್ಲದೆ, ಉಳಿದವರ ಮೇಲೆ ಹಲ್ಲೆ ನಡೆಸಿ, ನಗನಾಣ್ಯ ದೋಚಿ ಪರಾರಿಯಾದರು.

ಈ ಬಗ್ಗೆ ಬಾಗೆಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪರಿಚಿತರೇ ಈ ಕೃತ್ಯ ನಡೆಸಿರಬಹುದೆಂದು ಶಂಕಿಸಲಾಗಿದೆ. ಈ ಸಂಬಂಧ ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದಾರೆ.
ಮತ್ತಷ್ಟು
ಮುಂದುವರಿದೆ ಕರವೇ ಪ್ರತಿಭಟನೆ
ಬೆಳಗಾವಿ: ಕನ್ನಡಿಗನಿಗೆ ಮೇಯರ್ ಪಟ್ಟ
ರಾಜ್ಯದಲ್ಲಿ ಮೇಯಲ್ಲೇ ಚುನಾವಣೆ
ಕೃಷ್ಣರಿಂದ ರಾಜ್ಯಪಾಲರ ಭೇಟಿ
ತ್ವರಿತ ಚುನಾವಣೆಗೆ ಆಯೋಗ ಒಲವು; ಇಂದು ಸಭೆ
ಸಾಸ್ಕಿನ್ ಉದ್ಯೋಗಿಯ ಕನ್ನಡ ವಿರೋಧಿ ಕವನಕ್ಕೆ ಪ್ರತಿಭಟನೆ