ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಜೆಟ್ ವಿರೋಧಿಸಿ ರೈತರ ಸಮಾವೇಶ
ಕೇಂದ್ರ ಸರಕಾರದ ಬಜೆಟ್ ಜನರ ದಾರಿ ತಪ್ಪಿಸುವಂತಹ ಬಜೆಟ್ ಎಂದು ದೂರಿರುವ ಬಿಜೆಪಿ ಇದರ ವಿರುದ್ಧ ರಾಜ್ಯಾದ್ಯಂತ ಬೃಹತ್ ಸಮಾವೇಶ ನಡೆಸಲು ಉದ್ದೇಶಿಸಿದೆ.

ರೈತರ ಸಾಲಮನ್ನಾ ಮಾಡುವುದಾಗಿ ಕೇಂದ್ರ ವಿತ್ತ ಸಚಿವ ಪಿ. ಚಿದಂಬರಂ ಮಂಡಿಸಿರುವ ಬಜೆಟ್‌ನಲ್ಲಿ ಹೇಳಲಾಗಿದೆ. ಆದರೆ ಇದು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆರೋಪಿಸಿದ್ದಾರೆ.

ಬುಧವಾರ ನಗರದಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಅವರು, ರೈತರ ಸಾಲಮನ್ನಾಕ್ಕಾಗಿ 60ಕೋಟಿ ರೂ. ಯಾವ ಮೂಲದಿಂದ ಬರುತ್ತದೆ ಎಂಬುವುದು ಮುಖ್ಯ ಪ್ರಶ್ನೆ. ಚುನಾವಣೆಯಲ್ಲಿ ಮತದಾರರನ್ನು ಒಲೈಸುವುದಕ್ಕಾಗಿ ಬಜೆಟ್‌ನಲ್ಲಿ ಇಂತಹ ಕ್ರಮಗಳನ್ನು ಘೋಷಿಸಿದ್ದಾರೆ ಎಂದು ದೂರಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಡಿ.ವಿ.ಸದಾನಂದಗೌಡ, ದೇಶದ ಜನರ ದಾರಿ ತಪ್ಪಿಸುತ್ತಿರುವ ಯುಪಿಎ ಸರ್ಕಾರದ ವಿರುದ್ಧ ರೈತರ ಬೃಹತ್ ಸಮಾವೇಶವನ್ನು ಮಾರ್ಚ್ ಎರಡನೇ ವಾರದಲ್ಲಿ ನಡೆಸಲು ಪಕ್ಷ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳ 10ರಂದು ಪೂರ್ವಭಾವಿ ಸಭೆ ಕರೆಯಲಾಗುವುದು ಎಂದು ತಿಳಿಸಿದರು.
ಮತ್ತಷ್ಟು
ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲಿರುವ ಕೃಷ್ಣ
ಏಪ್ರಿಲ್ 15ರೊಳಗೆ ಚುನಾವಣಾ ದಿನಾಂಕ ಪ್ರಕಟ
ತೋಟಗಾರಿಕಾ ಅಭಿವೃದ್ಧಿಗೆ ಕೇಂದ್ರದಿಂದ 1200ಕೋ. ನೆರವು
ವ್ಯಕ್ತಿಯ ಕೊಂದು ನಗ-ನಗದು ದೋಚಿದ ದರೋಡೆಕೋರರು
ಮುಂದುವರಿದೆ ಕರವೇ ಪ್ರತಿಭಟನೆ
ಬೆಳಗಾವಿ: ಕನ್ನಡಿಗನಿಗೆ ಮೇಯರ್ ಪಟ್ಟ