ಸಿಲಿಂಡರ್ಗಳಿಗೆ ಅಕ್ರಮವಾಗಿ ಗ್ಯಾಸ್ ತುಂಬಿಸುತ್ತಿದ್ದ ಸಂದರ್ಭದಲ್ಲಿ ಸ್ಫೋಟಗೊಂಡ ಘಟನೆ ಪೊಲೀಸ್ ಠಾಣೆ ಬಡಾವಣೆಯಲ್ಲಿ ಸಂಭವಿಸಿದೆ. ಈ ಘಟನೆಯಲ್ಲಿ ಮೂವರಿಗೆ ಗಾಯಗಳಾಗಿವೆ.
ಸ್ಫೋಟದಲ್ಲಿ ಲಕ್ಷ್ಮೀ, ಪ್ರಮೋದ್ ಹಾಗೂ ಲಕ್ಷ್ಮೀಯ ತಂಗಿ ಗಾಯಗೊಂಡಿದ್ದು, ಸ್ಥಳಿಯ ಅಸ್ಪತ್ರೆಗೆ ದಾಖಲಿಸಲಾಗಿದೆ. ಇವರುಗಳ ಪೈಕಿ ಲಕ್ಷ್ಮೀ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ರಾಮನಗರ ಪೊಲೀಸ್ ಬಡಾವಣೆಯ ನಾರಾಯಣ ಎಂಬಾತನ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆ ಸಂಪೂರ್ಣ ಹಾನಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.
ಮನೆಯ ಮಾಲೀಕ ನಾರಾಯಣ ಎಂಬಾತ ಅಕ್ರಮವಾಗಿ ಎಚ್.ಪಿ. ಗ್ಯಾಸ್ ಖರೀದಿಸಿ ಬೇರೆ ಸಿಲಿಂಡರ್ಗಳಿಗೆ ಮರು ತುಂಬಿಸುವ ಕಾರ್ಯದಲ್ಲಿ ತೊಡಗಿದ್ದ. ಮನೆಯಲ್ಲಿ ಅಪಾರ ಪ್ರಮಾಣದ ಗ್ಯಾಸ್ ಸಿಲಿಂಡರ್‌ಗಳನ್ನು ಶೇಖರಿಸಲಾಗಿತ್ತು ಎಂದು ತಿಳಿದು ಬಂದಿದ್ದು, ಪೊಲೀಸರು ಅವುಗಳನ್ನು ವಶಪಡಿಸಿಕೊಂಡಿದ್ದಾರೆ.
|