ಸಲಿಂಗಕಾಮ ಪ್ರಕರಣದ ನಿಮಿತ್ತ ರಾಜ್ಯ ಹೈಕೋರ್ಟ್ ಶಿಕ್ಷೆಗೆ ಒಳಗಾಗಿದ್ದ ಸಿದ್ಧಗಂಗಾ ಮಠದ ಕಿರಿಯ ಸ್ವಾಮೀಜಿ ಶ್ರೀ ಗೌರಿಶಂಕರ ಸ್ವಾಮೀಜಿಯವರನ್ನು ಸರ್ವೋಚ್ಛ ನ್ಯಾಯಾಲಯ ದೋಷಮುಕ್ತಿ ಗೊಳಿಸಿದೆ.
ವಿದ್ಯಾರ್ಥಿಯೋರ್ವನನ್ನು ಈ ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂಬ ಆಪಾದನೆ ಹೊರಿಸಿ 1988ನೇ ಇಸವಿಯ ಸುಮಾರಿಗೆ ಸ್ವಾಮೀಜಿಯವರ ವಿರುದ್ಧ ಹೈಕೋರ್ಟ್ನಲ್ಲಿ ದೋಷಾರೋಪ ಪಟ್ಟಿಯನ್ನು ಸಲ್ಲಿಸಲಾಗಿತ್ತು ಮತ್ತು ಸತತ ವಿಚಾರಣೆಯ ನಂತರ 2004ರಲ್ಲಿ ಅವರಿಗೆ 25ಲಕ್ಷ ರೂ.ದಂಡ ಸಮೇತ 10ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರದ ಜೈಲಿನಲ್ಲಿ ಈಗಾಗಲೇ 4 ವರ್ಷದ ಸೆರೆವಾಸ ಪೂರ್ಣಗೊಳಿಸಿರುವ ಸ್ವಾಮೀಜಿ ಸದ್ಯದಲ್ಲಿಯೇ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
|