ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಚ್ಎಎಲ್ ನಿಲ್ದಾಣ ಮುಚ್ಚುಗಡೆ ಬೇಡ: ಸಮಿತಿ
ಈ ತಿಂಗಳ ಅಂತ್ಯದ ವೇಳೆಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಉದ್ಘಾಟನೆಯಾದ ನಂತರ ಸದ್ಯಕ್ಕೆ ಬಳಕೆಯಲ್ಲಿರುವ ಎಚ್.ಎ.ಎಲ್. ವಿಮಾನ ನಿಲ್ದಾಣವನ್ನು ಮುಚ್ಚದಿರುವುದು ಸೂಕ್ತ ಎಂಬುದಾಗಿ ಸಾರಿಗೆ-ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗೆ ಸಂಬಂಧಿಸಿದ ಸಂಸದೀಯ ಸ್ಥಾಯಿಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.

ಲಾಭ ಗಳಿಕೆಯ ಉದ್ದೇಶದಿಂದ ಕಟ್ಟಲಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೋಸ್ಕರ ತೆರಿಗೆದಾರರ ಹಣದಿಂದ ಕಟ್ಟಲಾದ ಎಚ್ಎಎಲ್ ವಿಮಾನ ನಿಲ್ದಾಣವನ್ನು ಮುಚ್ಚುವುದರ ಔಚಿತ್ಯವನ್ನು ಅದು ಪ್ರಶ್ನಿಸಿದೆ. ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾದ ಕೂಡಲೇ ಎಚ್ಎಎಲ್ ವಿಮಾನ ನಿಲ್ದಾಣವನ್ನು ಸ್ಥಗಿತಗೊಳಿಸುವುದಾಗಿ ಸರಕಾರ ಈ ಹಿಂದೆ ಹೇಳಿತ್ತು.

ಹೊಸ ವಿಮಾನ ನಿಲ್ದಾಣದ ಪ್ರವರ್ತಕರ ಜೊತೆ ಸರಕಾರ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಈಗಿನ ವಿಮಾನ ನಿಲ್ದಾಣವನ್ನು ಮುಚ್ಚದಿದ್ದರೆ ಸರಕಾರ ಕಾನೂನು ಕ್ರಮವನ್ನು ಎದುರಿಸಬೇಕಾಗುತ್ತದೆ. ಆದರೆ ಪ್ರವರ್ತಕರ ಜೊತೆ ಸರಕಾರ ಮರು ಮಾತುಕತೆಯನ್ನು ನಡೆಸುವುದರಿಂದ ಹಾಲಿ ವಿಮಾನ ನಿಲ್ದಾಣವನ್ನು ಮುಚ್ಚುವ ಕುರಿತಾದ ಒಪ್ಪಂದವನ್ನು ಬದಲಿಸಲು ಸಾಧ್ಯ ಎಂಬುದು ಸಮಿತಿಯ ಅಭಿಪ್ರಾಯ.

ಜಾಗತೀಕರಣ ಹಾಗೂ ಬೆಳೆಯುತ್ತಿರುವ ನಾಗರಿಕ ವಿಮಾನಯಾನ ವಲಯವನ್ನು ಗಮನದಲ್ಲಿಟ್ಟುಕೊಂಡು ನಗರವೊಂದರಲ್ಲಿ ಎರಡು ವಿಮಾನ ನಿಲ್ದಾಣಗಳನ್ನು ಹೊಂದುವುದು ರಾಷ್ಟ್ರದ ಮತ್ತು ವಾಣಿಜ್ಯ ವಲಯದ ದೃಷ್ಟಿಯಿಂದ ಒಳ್ಳೆಯದು ಎಂದು ಅಭಿಪ್ರಾಯ ಪಟ್ಟಿರುವ ಸಮಿತಿ ಸಾರ್ವಜನಿಕರ ಹಿತಕಾಯುವ ನಿಟ್ಟಿನಲ್ಲಿ ಸರಕಾರ ಜವಾಬ್ದಾರಿಯನ್ನು ನಿರ್ವಹಿಸುವುದು ಅಗತ್ಯ ಎಂದು ಹೇಳಿದೆ.
ಮತ್ತಷ್ಟು
ಕೃಷ್ಣ ರಾಜೀನಾಮೆ: ಲಾಭ ನಷ್ಟಗಳ ಲೆಕ್ಕಚಾರ
ರಾಜ್ಯದ 'ಕೈ' ಬಲಪಡಿಸಲು ರಾಜಭವನಕ್ಕೆ ಕೃಷ್ಣ 'ಬೈ'
ಗೌರಿಶಂಕರ ಸ್ವಾಮೀಜಿ ದೋಷಮುಕ್ತಿ
ಕೃಷ್ಣಾಗಮನ: ಕಾಂಗ್ರೆಸಲ್ಲಿ ಹೊಸ ಹುಮ್ಮಸ್ಸು
ಕೇಂದ್ರ ಬಜೆಟ್ ವಿರುದ್ಧ ಸಮರ: ಡಿವಿಎಸ್
ಗ್ಯಾಸ್ ಸಿಲಿಂಡರ್ ಸ್ಫೋಟ: ಮೂವರಿಗೆ ಗಾಯ