ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣಾಗಮನ: ಯಾರಿಗೆ ಒಳಿತು?
ರಾಜ್ಯ ರಾಜಕೀಯಕ್ಕೆ ಮಹಾರಾಷ್ಟ್ರ ರಾಜ್ಯಪಾಲ ಎಸ್.ಎಂ.ಕೃಷ್ಣರ ಮರುಪ್ರವೇಶ ಕೇವಲ ಅವರ ಪಕ್ಷದ ವಿರೋಧಿ ಬಣದಲ್ಲಷ್ಟೇ ಅಲ್ಲದೆ ಇತರ ಪಕ್ಷಗಳಲ್ಲೂ ನಡುಕ ಹುಟ್ಟಿಸಿದೆ. ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆಯ ಹೇರಿಕೆಯಾದಾಗಿನಿಂದ ಹೆಚ್ಚೂ ಕಡಿಮೆ ನಿಂತ ನೀರೇ ಆಗಿದ್ದ ರಾಜ್ಯ ರಾಜಕೀಯದಲ್ಲಿ ಈಗ ಒಮ್ಮಿಂದೊಮ್ಮೆಲೇ ಸಂಚಲನೆ ಸೃಷ್ಟಿಯಾಗಿದೆ.

ವಿಶೇಷವಾಗಿ ನಗರ ಪ್ರದೇಶದ ಮತದಾರರನ್ನು ನೆಚ್ಚಿಕೊಂಡಿದ್ದ ಬಿಜೆಪಿಗೆ ಕೃಷ್ಣ ಆಗಮನದಿಂದಾಗಿ ಕೊಂಚ ಹಿನ್ನಡೆಯುಂಟಾಗಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಕೃಷ್ಣರನ್ನು ಒಪ್ಪದಿರುವವರು ಇದ್ದಾರೆ ಎಂಬ ಅಂಶವೇ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಿಗೆ ನೆರವಾಗಬಲ್ಲದು. ಜೊತೆಗೆ ಉತ್ತರ ಕರ್ನಾಟಕ ಪ್ರಾಂತ್ಯದಲ್ಲೂ ಕೃಷ್ಣರಿಗೆ ಹೇಳಿಕೊಳ್ಳುವಂಥಾ ಬೆಂಬಲವಿಲ್ಲ ಎಂಬುದು ವಾಸ್ತವ ಸಂಗತಿ.

ಆದರೆ ಕೃಷ್ಣಾಗಮನ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆಯನ್ನಂತೂ ಹುಟ್ಟುಹಾಕಲಿದೆ. ಕೃಷ್ಣ ಸರಕಾರದಲ್ಲಿ ಸಚಿವರಾಗಿದ್ದ 34 ಮಂದಿ ಕಳೆದ ಚುನಾವಣೆಯಲ್ಲಿ ಸೋತಿದ್ದರು. ಇವರಿಗೆ ಮತ್ತೆ ಟಿಕೆಟ್ ದೊರೆತರೆ, ಅಸಮಾಧಾನಗೊಳ್ಳುವ ಕೆಲವರು ಬೇರೆ ಪಕ್ಷಕ್ಕೆ ಹಾರುವಲ್ಲಿಯೂ ಇದು ಪರ್ಯವಸಾನಗೊಳ್ಳಬಹುದು. ಇದು ಇತರ ಪಕ್ಷಗಳಿಗೆ ಪ್ರಯೋಜನಕಾರಿಯಾಗಲಿದೆ ಎಂಬುದು ಹೊಸದಾಗಿ ಕೇಳಿಬರುತ್ತಿರುವ ಮಾತು.

ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷದಲ್ಲಿ ದೇವೇಗೌಡರು ಹಾಗೂ ಎಸ್.ಎಂ.ಕೃಷ್ಣರು ತಮ್ಮದೇ ಆದ ನೆಲೆಗಟ್ಟಿನಲ್ಲಿ ಪ್ರಭಾವೀ ವಲಯವನ್ನು ಬೆಳೆಸಿಕೊಂಡಿರುವುದರಿಂದ ಒಕ್ಕಲಿಗರ ಮತಗಳು ಚೆಲ್ಲಾಪಿಲ್ಲಿಯಾಗುತ್ತವೆ. ತನಗೆ ಹೇಗಿದ್ದರೂ ಲಿಂಗಾಯಿತ ಸಮುದಾಯದ ಸಾಲಿಡ್ ವೋಟ್ ಬ್ಯಾಂಕೇ ಇದೆ. ಈ ಅಂಶವೇ ತನಗೆ ಗೆಲುವು ತಂದುಕೊಡುತ್ತದೆ ಎಂದು ಬಿಜೆಪಿ ನಂಬಿಕೊಂಡಿದೆ.
ಮತ್ತಷ್ಟು
ಎಚ್ಎಎಲ್ ನಿಲ್ದಾಣ ಮುಚ್ಚುಗಡೆ ಬೇಡ: ಸಮಿತಿ
ಕೃಷ್ಣ ರಾಜೀನಾಮೆ: ಲಾಭ ನಷ್ಟಗಳ ಲೆಕ್ಕಚಾರ
ರಾಜ್ಯದ 'ಕೈ' ಬಲಪಡಿಸಲು ರಾಜಭವನಕ್ಕೆ ಕೃಷ್ಣ 'ಬೈ'
ಗೌರಿಶಂಕರ ಸ್ವಾಮೀಜಿ ದೋಷಮುಕ್ತಿ
ಕೃಷ್ಣಾಗಮನ: ಕಾಂಗ್ರೆಸಲ್ಲಿ ಹೊಸ ಹುಮ್ಮಸ್ಸು
ಕೇಂದ್ರ ಬಜೆಟ್ ವಿರುದ್ಧ ಸಮರ: ಡಿವಿಎಸ್