ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೃಷ್ಣರಿಗೆ ಅದ್ದೂರಿ ಸ್ವಾಗತಕ್ಕೆ ಭರದ ಸಿದ್ಧತೆ
ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿರುವ ಎಸ್.ಎಂ.ಕೃಷ್ಣ ಇನ್ನೊಂದು ವಾರದಲ್ಲಿ ರಾಜ್ಯಕ್ಕೆ ಮರಳಲಿದ್ದು, ಸಕ್ರಿಯ ರಾಜಕಾರಣದಲ್ಲಿ ತೊಡಗಿಕೊಳ್ಳಲಿದ್ದಾರೆ.

ತಮ್ಮ ಹುದ್ದೆಗೆ ಈಗಾಗಲೇ ರಾಜೀನಾಮೆ ನೀಡಿದ್ದು, ಆ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವಹಿಸಿಕೊಟ್ಟು, ಈ ತಿಂಗಳ 10 ಅಥವಾ 12ರಂದು ರಾಜ್ಯಕ್ಕೆ ಮರಳಲಿದ್ದಾರೆ ಎಂದು ತಿಳಿದು ಬಂದಿದೆ.

ಕೃಷ್ಣರಿಗೆ ರಾಜ್ಯದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದ್ದು, ಸಮಾರಂಭವನ್ನು ಏರ್ಪಡಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರು ಹಾಗೂ ಕೃಷ್ಣ ಅಭಿಮಾನಿಗಳು ಭರದ ಸಿದ್ಧತೆ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಮಹಾರಾಷ್ಟ್ರದಿಂದ ಬೆಳಗಾವಿ ಮೂಲಕ ರಾಜ್ಯಕ್ಕೆ ಪ್ರವೇಶಿಸಲಿದ್ದು, ಅಲ್ಲಿಂದ ರಸ್ತೆ ಮೂಲಕ ಅದ್ದೂರಿ ಮೆರವಣಿಗೆಯಲ್ಲಿ ಕೃಷ್ಣರನ್ನು ರಾಜಧಾನಿಗೆ ಕರೆತರಲಾಗುವುದು ಎಂದು ಕಾಂಗ್ರೆಸ್ ತಿಳಿಸಿದೆ. ಈ ಮಧ್ಯೆ ಎಸ್.ಎಂ.ಕೃಷ್ಣ ಮರಳಿ ರಾಜಕಾರಣಕ್ಕೆ ಬಂದಿರುವುದಕ್ಕೆ ಹಲವು ಕಾಂಗ್ರೆಸ್ ಮುಖಂಡರು ಹರ್ಷ ವ್ಯಕ್ತಪಡಿಸಿದ್ದು, ಕೃಷ್ಣರ ತವರು ಜಿಲ್ಲೆ ಮಂಡ್ಯದಲ್ಲಿ ಯುವ ಕಾಂಗ್ರೆಸ್ ಅದ್ದೂರಿಯಾದ ಆಚರಣೆ ಹಮ್ಮಿಕೊಂಡಿತ್ತು.
ಮತ್ತಷ್ಟು
ಶೀಘ್ರ ಚುನಾವಣಾ ಸಿದ್ಧತೆ ಪೂರ್ಣ
ಅರವಿಂದ ಮಿಲ್‌ಗೆ ಮತ್ತೆ ಬೆಂಕಿ
ಕೃಷ್ಣಾಗಮನ: ಯಾರಿಗೆ ಒಳಿತು?
ಎಚ್ಎಎಲ್ ನಿಲ್ದಾಣ ಮುಚ್ಚುಗಡೆ ಬೇಡ: ಸಮಿತಿ
ಕೃಷ್ಣ ರಾಜೀನಾಮೆ: ಲಾಭ ನಷ್ಟಗಳ ಲೆಕ್ಕಚಾರ
ರಾಜ್ಯದ 'ಕೈ' ಬಲಪಡಿಸಲು ರಾಜಭವನಕ್ಕೆ ಕೃಷ್ಣ 'ಬೈ'