ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೋರ್ಟ್ ಆದೇಶದ ಬಳಿಕವೇ ಗೌರಿಶಂಕರ ಬಿಡುದಡೆ
ಸಲಿಂಗ ಕಾಮ ಆರೋಪದಿಂದ ಮುಕ್ತರಾಗಿರುವ ತುಮಕೂರು ಸಿದ್ಧಗಂಗಾಮಠದ ಮಾಜಿ ಕಿರಿಯ ಸ್ವಾಮೀಜಿಯಾಗಿರುವ ಗೌರಿಶಂಕರ ಸ್ವಾಮೀಜಿಯವರನ್ನು, ಸುಪ್ರೀಂಕೋರ್ಟ್ ಆದೇಶದ ತಲುಪಿದ ಬಳಿಕವೇ ಬಿಡುಗಡೆಗೊಳಿಸುವುದು ಎಂದು ಇಲ್ಲಿನ ಕೇಂದ್ರ ಕಾರಾಗೃಹದ ಅಧಿಕಾರಿಗಳು ತಿಳಿಸಿದ್ದಾರೆ.

ಹೈಕೋರ್ಟ್ ನೀಡಿರುವ ತೀರ್ಪಿನಾಧಾರದಲ್ಲಿ ಗೌರಿಶಂಕರ್ ಸ್ವಾಮೀಜಿ ಕಳೆದ 2002ರಿಂದ ಕಾರಾಗೃಹದಲ್ಲಿದ್ದಾರೆ. ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ, ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಬುಧವಾರದಂದು ಕೈಗೆತ್ತಿಕೊಂಡ ಸುಪ್ರೀಂಕೋರ್ಟ್, ಸ್ವಾಮೀಜಿಯವರನ್ನು ಪ್ರಕರಣದಿಂದ ದೋಷಮುಕ್ತಗೊಳಿಸಿದೆ.

ಈ ಸಂಬಂಧ ಇಂದು ಕಾರಾಗೃಹದಿಂದ ಕಿರಿಯ ಸ್ವಾಮೀಜಿ ಬಿಡುಗಡೆಗೊಳ್ಳಬೇಕಾಗಿತ್ತು. ಆದರೆ ಆದೇಶದ ಪ್ರತಿ ತಲುಪದ ಕಾರಣ ಸ್ವಾಮೀಜಿಯವರನ್ನು ಬಿಡುಗಡೆ ಮಾಡಲಾಗುವುದಿಲ್ಲವೆಂದು ಕಾರಾಗೃಹ ಸ್ಪಷ್ಟನೆ ನೀಡಿದೆ.
ಮತ್ತಷ್ಟು
ಕೃಷ್ಣರಿಗೆ ಅದ್ದೂರಿ ಸ್ವಾಗತಕ್ಕೆ ಭರದ ಸಿದ್ಧತೆ
ಶೀಘ್ರ ಚುನಾವಣಾ ಸಿದ್ಧತೆ ಪೂರ್ಣ
ಅರವಿಂದ ಮಿಲ್‌ಗೆ ಮತ್ತೆ ಬೆಂಕಿ
ಕೃಷ್ಣಾಗಮನ: ಯಾರಿಗೆ ಒಳಿತು?
ಎಚ್ಎಎಲ್ ನಿಲ್ದಾಣ ಮುಚ್ಚುಗಡೆ ಬೇಡ: ಸಮಿತಿ
ಕೃಷ್ಣ ರಾಜೀನಾಮೆ: ಲಾಭ ನಷ್ಟಗಳ ಲೆಕ್ಕಚಾರ