ಆಸ್ಟ್ರೇಲಿಯನ್ ಹೈಕಮೀಷನ್, ನ್ಯೂಡೆಲ್ಲಿ ಮತ್ತು ಸುಚಿತ್ರ ಫಿಲಂ ಸೊಸೈಟಿ ಸಂಯುಕ್ತ ಆಶ್ರಯದಲ್ಲಿ ಮಾರ್ಚ್ 14ರಿಂದ 17ರವರೆಗೆ ಆಸ್ಟ್ರೇಲಿಯನ್ ಚಲನಚಿತ್ರೌತ್ಸವವನ್ನು ನಗರದಲ್ಲಿ ಆಯೋಜಿಸಲಿದೆ.
ಸುಚಿತ್ರ ಫಿಲಂ ಸೊಸೈಟಿ ಕಾರ್ಯದರ್ಶಿ ಶ್ರೀಧರ್ ಮತ್ತು ಖ್ಯಾತ ನಿರ್ದೇಶಕ ಗೀರೀಶ್ ಕಾಸರವಳ್ಳಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಈ ಸಂಬಂಧ ನಗರದ ಕೆಂಗಲ್ ಹನುಮಂತಯ್ಯ ರಸ್ತೆಯಲ್ಲಿರುವ ಮಿಷನ್ ಸಿನಿಮಾಸ್‌ನಲ್ಲಿ ಆಸ್ಟ್ರೇಲಿಯಾ ಚಿತ್ರಗಳ ಪ್ರದರ್ಶನವನ್ನು ಏರ್ಪಡಿಸಲಾಗಿದ್ದು, ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ಕಾಸರವಳ್ಳಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ 10 ಆಸ್ಟ್ರೇಲಿಯನ್ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅಲ್ಲಿನ ಚಿತ್ರಗಳ ಕಥೆಗಳ ಗುಣಮಟ್ಟ ತಾಂತ್ರಿಕತೆಯನ್ನು ಭಾರತದ ಚಿತ್ರಪ್ರಿಯರಿಗೆ ಪರಿಚಯಿಸಲಾಗುವುದು ಎಂದು ಅವರು ತಿಳಿಸಿದರು. ಚಿತ್ರೋತ್ಸವದ ಉದ್ಘಾಟನೆಯನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಐ.ಎಂ. ವಿಠ್ಠರಮೂರ್ತಿ ಉದ್ಘಾಟಿಸಲಿದ್ದು, ಉಚಿತ ಪ್ರವೇಶ ಲಭ್ಯವಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.
|