ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಟ್ಯಾಕ್ಸಿ ಗುತ್ತಿಗೆಯನ್ನು ದೆಹಲಿ ಮೂಲದ ಕಂಪೆನಿಯೊಂದಕ್ಕೆ ನೀಡಿ, ಎಚ್ಎಎಲ್ ವಿಮಾನ ನಿಲ್ದಾಣದಲ್ಲಿ ದುಡಿಯುತ್ತಿದ್ದ ಟ್ಯಾಕ್ಸಿಗಳನ್ನು ಹೊರಹಾಕಿರುವುದನ್ನು ವಿರೋಧಿಸಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿತು.
ವಿಮಾನ ನಿಲ್ದಾಣದ ಬಿಐಎಎಲ್ ಕೇಂದ್ರ ಕಚೇರಿ ಬಳಿ ನಡೆಸಲಾದ ಬೃಹತ್ ಪ್ರತಿಭಟನೆಯಲ್ಲಿ ಒಕ್ಕೂಟದ ಸದಸ್ಯರು ಹಾಗೂ ಟ್ಯಾಕ್ಸಿ ಚಾಲಕರು ಪಾಲ್ಗೊಂಡಿದ್ದರು.
ನೂತನವಾಗಿ ನಿರ್ಮಾಣವಾಗಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಟ್ಯಾಕ್ಸಿ ಗುತ್ತಿಗೆಯನ್ನು ಹೊರರಾಜ್ಯದವರಿಗೆ ನೀಡಿರುವುದನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ ಸದಸ್ಯರು, ಒಕ್ಕೂಟದ ಈ ನಿರ್ಧಾರದಿಂದ ಸುಮಾರು 700 ಟ್ಯಾಕ್ಸಿ ಮಾಲೀಕರು ಬೀದಿಗೆ ಬಂದಿದ್ದಾರೆ. ಪ್ರಸ್ತುತ ದೆಹಲಿ ಕಂಪೆನಿಗೆ ನೀಡಿರುವ ಗುತ್ತಿಗೆ ಹಿಂದಕ್ಕೆ ಪಡೆದು ತಮಗೆ ಅವಕಾಶ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು. ಮಾಜಿ ಶಾಸಕ ಪ್ರಭಾಕರ ರೆಡ್ಡಿ, ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್, ಟ್ಯಾಕ್ಸಿ ಸಂಘದ ಪ್ರಧಾನ ಕಾರ್ಯದರ್ಶಿ ನೀಲಕಂಠ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು.
|