ಬಂಧನದಲ್ಲಿರುವ ಶಂಕಿತ ಉಗ್ರರ ನ್ಯಾಯಾಂಗ ಬಂಧನವನ್ನು ಹುಬ್ಬಳ್ಳಿಯ ಜೆಎಂಎಫ್ ನ್ಯಾಯಾಧೀಶ ಶ್ರೀನಿವಾಸ್ ಮಾರ್ಚ್ 14ವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ.
ಶಂಕಿತ ಉಗ್ರರಾದ ಯಹ್ಯಾಖಾನ್ ಕಮ್ಮಕುಟ್ಟಿ, ಸಮೀರ್ ಸಿದ್ದಿಕ್, ಅಲ್ಲಾಭಕ್ಷ್ ಯದವಾಡ್‌ನನ್ನು ವಿಚಾರಣೆಗೊಳಪಡಿಸಿದ ಜೆಎಂಎಫ್ ನ್ಯಾಯಲಯದ ನ್ಯಾಯಾಧೀಶ ಶ್ರೀನಿವಾಸ್ ಆರೋಪಿಗಳ ನ್ಯಾಯಾಂಗವಶವನ್ನು ವಿಸ್ತರಿಸ್ದಾರೆ. ಅಲ್ಲದೆ, ಇನ್ನಿಬ್ಬರು ಉಗ್ರರಾದ ಅಸಾದುಲ್ಲಾ ಹಾಗೂ ಮಹಮದ್ ಗೌಸ್‌ನನ್ನು ಮಾರ್ಚ್ 22ರ ಒಳಗೆ ನ್ಯಾಯಾಲಯಕ್ಕೆ ಹಾಜರು ಪಡಿಸುವಂತೆ ಆದೇಶ ನೀಡಿದ್ದಾರೆ.
ಈ ಮಧ್ಯೆ, ಕೃಷಿ ವಿಜ್ಞಾನದ ಇಬ್ಬರು ಅಧಿಕಾರಿಗಳನ್ನು ಸಿಓಡಿ ಪೊಲೀಸರು ಬಂಧಿಸಿದ್ದಾರೆ ಎಂಬ ವರದಿಯನ್ನು ಸಿಓಡಿ ಪೊಲೀಸರು ಅಲ್ಲಗೆಳೆದಿದ್ದಾರೆ. ಅಲ್ಲದೆ, ಪ್ರಸ್ತುತ ಬಂಧಿತರಾಗಿರುವ ಶಂಕಿತ ಉಗ್ರರ ಕುರಿತು ಸಾಕ್ಷಾಧಾರಗಳನ್ನು ಸಂಗ್ರಹಿಸುತ್ತಿದ್ದೇವೆ. ಆ ಬಳಿಕವಷ್ಟೇ ಅವರು ಉಗ್ರರೇ ಎಂಬುದನ್ನು ಖಚಿತ ಪಡಿಸಬೇಕಾಗಿದೆ ಎಂದು ಸಿಓಡಿ ಪೊಲೀಸರು ತಿಳಿಸಿದ್ದಾರೆ.
ಯಾಹ್ಯಾನ ವಿಚಾರಣೆ ನಡೆಸಿದ ಸಂದರ್ಭದಲ್ಲಿ, ತನಗೆ ಕುಟುಂಬದವರನ್ನು ನೋಡಲು ಅವಕಾಶ ಮಾಡಿಕೊಡಬೇಕೆಂದು ನ್ಯಾಯಧೀಶರಲ್ಲಿ ಕೇಳಿದ್ದು, ಇದಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ. ಈ ಮಧ್ಯೆ ಆಸಿಫ್ ವಿಚಾರದಲ್ಲಿ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ದೂರಿ, ಆಸಿಫ್ ಪರ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಮಾರ್ಚ್ 10ಕ್ಕೆ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
|