ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಾರ್ಚ್ 23ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಮಾರ್ಚ್ 23ಕ್ಕೆ ನಗರಕ್ಕೆ ಆಗಮಿಸಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ಐದು ದಿನಗಳ ರಾಜ್ಯ ಪ್ರವಾಸದಲ್ಲಿ ಕಾಂಗ್ರೆಸ್ ನಡೆಸಲಿರುವ ಅನೇಕ ಬೃಹತ್ ಸಮಾವೇಶಗಳಲ್ಲಿ ರಾಹುಲ್ ಪಾಲ್ಗೊಳ್ಳಲಿದ್ದಾರೆ ಎಂದು ನುಡಿದರು.

ಯಾವುದೇ ಸಮಯದಲ್ಲಿ ರಾಜ್ಯದಲ್ಲಿ ಚುನಾವಣೆ ಘೋಷಿಸಿದರೂ, ಕಾಂಗ್ರೆಸ್ ಸಿದ್ಧವಾಗಿದೆ. ಜನರಲ್ಲಿ ಕಾಂಗ್ರೆಸ್ ಪಕ್ಷದ ನೀತಿ ನಿಯಮಗಳನ್ನು ಮನದಟ್ಟು ಮಾಡಿಕೊಡುವ ನಿಟ್ಟಿನಲ್ಲಿ ಜನಾಂದೋಲನವನ್ನು ಆಯೋಜಿಸಲಿದೆ. ಈ ಸಂದರ್ಭದಲ್ಲಿ ಪಕ್ಷದ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷ ಮಾರ್ಚ್ 16ರಂದು ಜನಾಂದೋಲನ ನಡೆಸಲಿದೆ. ಈ ಜನಾಂದೋಲಕ್ಕೆ ಮೈಸೂರಿನಲ್ಲಿ ಚಾಲನೆ ದೊರೆಯಲಿದೆ ಎಂದು ಅವರು ತಿಳಿಸಿದರು.
ಮತ್ತಷ್ಟು
ರಾಜಭವನದೆದುರು ಕರವೇ ಪ್ರತಿಭಟನೆ
ಕೃಷ್ಣ ತಲುಪುವ ಮುನ್ನವೇ ಅಸಮಾಧಾನದ ಹೊಗೆ
ಎರಡೆರಡು ವಿಮಾನ ನಿಲ್ದಾಣಗಳು ಅಗತ್ಯವಿಲ್ಲ
ಶಂಕಿತ ಉಗ್ರರ ನ್ಯಾಯಾಂಗ ವಶ ಮಾ.14ಕ್ಕೆ ವಿಸ್ತರಣೆ
ಎಚ್ಎಎಲ್ ಟ್ಯಾಕ್ಸಿ ಸದಸ್ಯರ ಪ್ರತಿಭಟನೆ
ಮಾ.14: ನಗರದಲ್ಲಿ ಆಸ್ಟ್ರೇಲಿಯನ್ ಚಿತ್ರೋತ್ಸವ