ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕಾಂಗ್ರೆಸ್ ಜತೆ ಪ್ರಕಾಶ್ ಮಾತುಕತೆ
ಮಾಜಿ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಶುಕ್ರವಾರ ಸಂಜೆ ಹೈಕಮಾಂಡ್ ಜೊತೆ ಮಾತುಕತೆ ನಡೆಸಲಿದ್ದು, ಶೀಘ್ರವೇ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.

ವಿಧಾನಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಪ್ರಕಾಶ್ ಭೇಟಿ ಮಹತ್ವ ಬಂದಿದೆ. ಜೆಡಿಎಸ್ ತೊರೆದ ಬಳಿಕ ಪ್ರಕಾಶ್ ಯಾವ ಪಕ್ಷಕ್ಕೆ ಸೇರುತ್ತಾರೆಂಬುದು ಕುತೂಹಲದ ವಿಷಯವಾಗಿತ್ತು.

ಬಿಜೆಪಿ ಆಹ್ವಾನಿಸಿದರೂ, ತಮ್ಮ ಬಣದ ನಿರ್ಧಾರಕ್ಕೆ ಬಾಗಿದ ಪ್ರಕಾಶ್ ಆಹ್ವಾನ ಸ್ವೀಕರಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೆ ರಾಜಕೀಯ ಭವಿಷ್ಯ ಎತ್ತ? ಅನ್ನುತ್ತಿರುವಾಗಲೇ ಬಿಜೆಪಿ-ಜೆಡಿಎಸ್ ನಡುವಿನ ಜಗಳದಲ್ಲಿ ಸ್ವಲ್ಪ ಮುಖ ತೋರಿಸಿಕೊಂಡ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸಲು ತಂತ್ರ ರೂಪಿಸಿದರೂ, ಅದಕ್ಕೆ ತಕ್ಕುದಾದ ನಾಯಕನ ಅವಶ್ಯವಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದ ಹೈಕಮಾಂಡ್, ಪ್ರಕಾಶ್ ಬಣದ ಜೊತೆ ಹಲವು ಸುತ್ತಿನ ಮಾತುಕತೆ ನಡೆಸಿ, ಕಾಂಗ್ರೆಸ್ ಸೇರಿಸುವ ಪ್ರಯತ್ನ ನಡೆಸಿತು.

ಇವೆಲ್ಲವುಗಳ ನಡುವೆ ಪ್ರಕಾಶ್ ಬಣದವರಲ್ಲಿ ಕೆಲವರು ಜೆಡಿಎಸ್ ಒಲವು ತೋರಿದರೆ ಇನ್ನು ಕೆಲವರು ಕಾಂಗ್ರೆಸ್‌ನತ್ತ ಮುಖ ಮಾಡಿದಾಗ ಪ್ರಕಾಶ್‌ಗೆ ಗೊಂದಲದ ಸ್ಥಿತಿ ನಿರ್ಮಾಣವಾಗಿತ್ತು. ಈಗ ಶೀಘ್ರದಲ್ಲಿ ವಿಧಾನಸಭಾ ಚುನಾವಣೆ ಎಂದು ಚುನಾವಣಾ ಆಯೋಗ ತಿಳಿಸಿರುವಂತೆ, ರಾಜ್ಯದಲ್ಲಿನ ರಾಜಕೀಯ ಪಕ್ಷಗಳು ಚುರುಕುಗೊಂಡಿತು. ಈ ಸಂದರ್ಭದಲ್ಲಿ ಮತ್ತೆ ಚುರುಕುಗೊಂಡಿರುವ ಪ್ರಕಾಶ್ ಕಾಂಗ್ರೆಸ್ ಕೈಹಿಡಿಯುವ ನೀರೀಕ್ಷೆಯಲ್ಲಿದ್ದಾರೆ.
ಮತ್ತಷ್ಟು
ನಿಪ್ಪಾಣಿ ನಗರಸಭೆ ವಜಾಗೆ ಕರವೇ ಒತ್ತಾಯ
ಮಾರ್ಚ್ 23ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ
ರಾಜಭವನದೆದುರು ಕರವೇ ಪ್ರತಿಭಟನೆ
ಕೃಷ್ಣ ತಲುಪುವ ಮುನ್ನವೇ ಅಸಮಾಧಾನದ ಹೊಗೆ
ಎರಡೆರಡು ವಿಮಾನ ನಿಲ್ದಾಣಗಳು ಅಗತ್ಯವಿಲ್ಲ
ಶಂಕಿತ ಉಗ್ರರ ನ್ಯಾಯಾಂಗ ವಶ ಮಾ.14ಕ್ಕೆ ವಿಸ್ತರಣೆ