ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಜ್ಯ ಸುದ್ದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗ್ಯಾಸ್ ಸಿಲಿಂಡರ್ ಸ್ಫೋಟ: 8 ಮನೆಗಳು ಜಖಂ
ಬೊಮ್ಮನಹಳ್ಳಿ ಸಮೀಪ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಇಬ್ಬರಿಗೆ ತೀವ್ರ ಗಾಯಗಳಾಗಿದ್ದು, ಹಲವು ಮನೆಗಳು ಜಖಂಗೊಂಡಿವೆ.

ಬೊಮ್ಮನಹಳ್ಳಿಯ ಹೊಂಗಸಂದ್ರದಲ್ಲಿ ಕಾವೇರಿನಗರದಲ್ಲಿ ಶುಕ್ರವಾರ ಸಿಲಿಂಡರ್ ಗ್ಯಾಸ್ ಸ್ಫೋಟಗೊಂಡಿದ್ದರಿಂದ ಸತ್ಯಭಾಮಾ ಎಂಬ ಮಹಿಳೆ ಹಾಗೂ ಮಗುವಿಗೆ ತೀವ್ರತರದ ಗಾಯಗಳಾಗಿದ್ದು, ಸ್ಥಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರೀಶೀಲನೆ ನಡೆಸಿದ್ದಾರೆ.

ಈ ಘಟನೆಯಿಂದ ಸುಮಾರು 7-8 ಮನೆಗಳು ಜಖಂಗೊಂಡಿದ್ದು, ಹಲವು ಮನೆಗಳ ಗೋಡೆಗಳಲ್ಲಿ ಬಿರುಕು ಕಂಡು ಬಂದಿದೆ. ಗ್ಯಾಸ್ ಸಿಲಿಂಡರ್ ಸೋರಿಕೆಯೇ ಈ ಘಟನೆಗೆ ಕಾರಣವೆಂದು ಪ್ರಾಥಮಿಕ ಹಂತದ ತನಿಖೆಯಿಂದ ತಿಳಿದು ಬಂದಿದ್ದರೂ, ಸ್ಫೋಟಕ ವಸ್ತುಗಳಿಂದ ಈ ಅನಾಹುತ ಸಂಭವಿಸಿದೆ ಅನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.

ಮನೆಯಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್ ಪೈಕಿ ಒಂದು ಸ್ಫೋಟಗೊಂಡಿದ್ದರಿಂದ ಈ ಘಟನೆ ಸಂಭವಿಸಿದ್ದು, ಅಲ್ಲೇ ಇದ್ದ ಆಟೋ ರಿಕ್ಷಾ ಕೂಡ ಜಖಂಗೊಂಡಿದೆ
ಮತ್ತಷ್ಟು
ಕಾಂಗ್ರೆಸ್ ಜತೆ ಪ್ರಕಾಶ್ ಮಾತುಕತೆ
ನಿಪ್ಪಾಣಿ ನಗರಸಭೆ ವಜಾಗೆ ಕರವೇ ಒತ್ತಾಯ
ಮಾರ್ಚ್ 23ಕ್ಕೆ ರಾಜ್ಯಕ್ಕೆ ರಾಹುಲ್ ಗಾಂಧಿ
ರಾಜಭವನದೆದುರು ಕರವೇ ಪ್ರತಿಭಟನೆ
ಕೃಷ್ಣ ತಲುಪುವ ಮುನ್ನವೇ ಅಸಮಾಧಾನದ ಹೊಗೆ
ಎರಡೆರಡು ವಿಮಾನ ನಿಲ್ದಾಣಗಳು ಅಗತ್ಯವಿಲ್ಲ