ಅಪಘಾತಕ್ಕೀಡಾದ ಹಡಗಿನಿಂದ ಅನಿಲ ಸೋರಲು ಆರಂಭಿಸಿದ್ದು ಕಾರವಾರ ಮೀನುಗಾರರು ಆತಂಕಕ್ಕೀಡಾಗಿದ್ದಾರೆ.
2006ರ ಮೇ 28ರಂದು ಪನಾಮದಿಂದ ಬಂದಿದ್ದ ಒಷಿಯಾ ಸೆರೆಯಾ ಹಡಗು ಕಾರವಾರದ ಬಳಿ ಅಪಘಾತಕ್ಕೀಡಾಗಿತ್ತು. ಆ ಸಂದರ್ಭದಲ್ಲಿ ಮೀನುಗಾರರ ನೆರವಿಗೆ ಬಂದ ಅಧಿಕಾರಿಗಳು ಪರಿಹಾರ ನೀಡುವುದಾಗಿ ಹೇಳಿದ್ದರೂ, ಇದುವರೆಗೆ ಯಾವ ಪರಿಹಾರವೂ ಮೀನುಗಾರರಿಗೆ ದಕ್ಕಿಲ್ಲ. ಇದರಿಂದ ಮೀನುಗಾರರು ಸಂಕಷ್ಟದಲ್ಲಿದ್ದು, ಹೋರಾಟ ನಡೆಸಲು ಮುಂದಾಗಿದ್ದಾರೆ.
ದುರಂತಕ್ಕೀಡಾಗಿರುವ ಹಡಗನ್ನು ಗುಜರಾತ್‌ಗೆ ವರ್ಗಾವಣೆ ಮಾಡುವ ಕುರಿತು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಹೇಳಿದ್ದಾರಾದರೂ ಕೆಲಸ ಮಾತ್ರ ಪ್ರಾರಂಭಗೊಂಡಿಲ್ಲ. ಇದರಿಂದ ಅನಿಲ ಸೋರಿಕೆ ನಿರಂತರವಾಗಿ ಮುಂದುವರಿಯುತ್ತಲೇ ಇದೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ತಮಗೆ ಅನ್ಯಾಯವಾಗಿದೆ ಎಂದು ಮೀನುಗಾರರು ಆರೋಪಿಸುತ್ತಿದ್ದಾರೆ.
ಮೀನುಗಾರರ ಜೀವನಾಧಾರವಾಗಿದ್ದ ಮೀನುಗಾರಿಕೆಗೆ ಅನಿಲ ಸೋರಿಕೆಯಿಂದಾಗಿ ಧಕ್ಕೆಯುಂಟಾಗಿದ್ದು ಅವರು ನಷ್ಟವನ್ನನುಭವಿಸಿದ್ದಾರೆ. ಈ ನಡುವೆ ಅಧಿಕಾರಿಗಳಿಗೆ ಮನವಿ ಮಾಡಿದರೂ, ಯಾವುದೇ ಪರಿಹಾರ ನೀಡಲಿಲ್ಲ ಎಂದು ಅವರು ದೂರಿದ್ದಾರೆ.
|